ಅಮೆರಿಕ ಶಾಲೆಯಲ್ಲಿ ಮಕ್ಕಳ ಭೀಕರ ಹತ್ಯೆ: ಮುಖ್ಯಾಂಶ
ನ್ಯೂಯಾರ್ಕ್, ಡಿ.15: ಅಮೆರಿಕದ ಪ್ರಾಥಮಿಕ ಶಾಲೆಯಲ್ಲಿ ಮರಣಮೃದಂಗ ಬಾರಿಸಿ 20 ಮಕ್ಕಳ ದಾರುಣ ಸಾವಿಗೆ ಕಾರಣವಾದ ಪಾಪಿಯ ಹೆಸರು ರಯಾನ್ ಲಾಂಜಾ. ವಯಸ್ಸು 20.
* ನನ್ನ ಹೃದಯ ಛಿದ್ರವಾಗಿದೆ ಎಂದು ಮಮ್ಮಲ ಮರುಗಿದ ಅಧ್ಯಕ್ಷ ಒಬಾಮಾ
* ತಾಯಿಯ ಕಾರಿನಲ್ಲಿ ಶಾಲೆಗೆ ಬಂದು ಹತ್ಯಾಕಾಂಡ ನಡೆಸಿದ ಪಾಪಿ
* ಕ್ರಿಸ್ ಮಸ್ ಹಬ್ಬಕ್ಕೆ ಇನ್ನೆರಡು ವಾರ ಇರುವಾಗ ಮಾರಣಹೋಮ
* ಜನರಿಗೆ ದಿಗ್ಭ್ರಮೆ, ಮುಗಿಲುಮುಟ್ಟಿದ ಪೋಷಕರ ಆಕ್ರಂದನ

* ಪಾತಕಿ ರಯಾನನ ಸೋದರನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಅವನ ಸ್ನೇಹಿತನನ್ನೂ
* ಈ ಮಧ್ಯೆ ರಯಾನನ ಗರ್ಲ್ ಫ್ರೆಂಡ್ ನ್ಯೂಜೆರ್ಸಿಯಲ್ಲಿ ನಾಪತ್ತೆಯಾಗಿದ್ದಾಳೆ
* ಇಷ್ಟಾಗಿ ಘಟನೆಗೆ ಕಾರಣ ತಿಳುದುಬಂದಿಲ್ಲ
* ಅಮೆರಿಕದ ಇತಿಹಾಸದಲ್ಲೇ ಇದು ಅತ್ಯಂತ ಭೀಬತ್ಸ ಹತ್ಯಾಕಾಂಡ
* ಪಾತಕಿ ರಯಾನ್ 100 ಸುತ್ತು ಗುಂಡು ಹಾರಿಸಿದ್ದಾನೆ
* ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ
* ಶಾಲೆ ನ್ಯೂಯಾಕಿನಿಂದ 96 ಕಿಮೀ ದೂರದಲ್ಲಿದೆ
* ಮೃತಪಟ್ಟ ಮಕ್ಕಳೆಲ್ಲ 5 ರಿಂದ 10 ವರ್ಷದ ಮುಗ್ಧರು
* ಪಾತಕಿಯ ತಾಯಿ ನ್ಯಾನ್ಸಿ ಲಾಂಜಾ ಸಹ ಸಾವು
* 18 ಮಕ್ಕಳು ಶಾಲೆಯಲ್ಲೇ ಸಾವು, ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ
* ಶಾಲಾ ಆವರಣದಲ್ಲಿ ಇತರೆ 7 ಮಂದಿಯ ಹತ್ಯೆ
* ಗುಂಡಿನ ಮೊರೆತ ಕೇಳಿದ ಪಕ್ಕದ ಕೊಠಡಿಗಳ ಟೀಚರುಗಳು ಭಯೋತ್ಪಾದಕ ದಾಳಿಯಿರಬಹುದೆಂದು ಬೆಚ್ಚಿಬಿದ್ದಿದ್ದಾರೆ
ತಕ್ಷಣ ಬಾಗಿಲು ಬಂದ್ ಮಾಡಿ ಮಕ್ಕಳನ್ನೆಲ್ಲ ಅವಿತುಕೊಳ್ಳುವಂತೆ ಹೇಳಿ ಪೊಲೀಸರು ಬರುವವರೆಗೂ ಮಕ್ಕಳನ್ನು ಕಾಪಾಡಿಕೊಂಡಿದ್ದಾರೆ.
* 2007ರಲ್ಲಿ ವರ್ಜೀನಿಯಾ ಟೆಕ್ನಾಲಜಿ ಯೂಣಿವರ್ಸಿಟಿಯಲ್ಲಿ ನಡೆದ ಹತ್ಯಾಕಾಂಡದಲ್ಲಿ 32 ಮಂದಿ ಅಸುನೀಗಿದ್ದರು.
* ನ್ಯೂಯಾರ್ಕ್, ಜಗತ್ತಿನಲ್ಲಿ ಅತಿ ಹೆಚ್ಚು ಪಾತಕ ಕೃತ್ಯಗಳು ನಡೆಯುವ ಕುಖ್ಯಾತಿ ಗಳಿಸಿದ್ದು, ಅಲ್ಲೀಗ ಶಸ್ತ್ರಾಸ್ತ್ರಗಳ ಪರವಾನಗಿ ನೀತಿಯನ್ನು ಬಿಗಿಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications