ಪಾಕ್: ಹಿಂದೂ ಬಾಲಕಿ ರೇಪ್; 10ದಿನದ ನಂತರ ಆಸ್ಪತ್ರೆಗೆ

ಒಂದನೇ ತರಗತಿಯಲ್ಲಿ ಓದುತ್ತಿರುವ ಈ ಮಗು ಉಮರ್ ಕೋಟ್ ಜಿಲ್ಲೆಯ ಗುಲಾಂ ನಬಿ ಷಾ ಪ್ರದೇಶದಲ್ಲಿ ಆಟವಾಡುತ್ತಿದ್ದಳು. ಆ ವೇಳೆ ಸಮೀಪದ ಜೂಜುಕಟ್ಟೆಯ ಮಾಲೀಕ ಹಷೀಂ ಮಾಗಿರೊ ಆ ಬಾಲಕಿಯನ್ನು ಅಪಹರಿಸಿ, ಅಮಾನುಷ ಅತ್ಯಾಚಾರವೆಸಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ಇಂದು ವರದಿ ಮಾಡಿವೆ. ಡಿಸೆಂಬರ್ 3ರಂದು ಈ ಘಟನೆ ನಡೆದಿದೆ.
ಅನೇಕ ಮಹಿಳಾ ಸಂಘಟನೆಗಳು ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಮತ್ತು ದುರುಳನನ್ನು ಶಿಕ್ಷಿಸಬೇಕು ಎಂದೂ ಆಗ್ರಹಿಸಿದ್ದಾರೆ. ಬಾಲಕಿಯ ಮನೆಯವರನ್ನು ಕಂಡು ಕಾನೂನು ನೆರವು ದೊರಕಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು 'ವಾರ್ ಎಗೆನಿಸ್ಟ್ ರೇಪ್' ಸಂಘಟನೆಯ ರುಕ್ಸಾನಾ ಸಿದ್ದಿಖಿ ಹೇಳಿದ್ದಾರೆ.
ಘಟನೆ ನಡೆದ ನಂತರ ತಕ್ಷಣ ಸ್ಥಳೀಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಲ್ಲಿ ವೈದ್ಯರು ಇರಲಿಲ್ಲ. ಅಲ್ಲಿಂದ ಮತ್ತೆ 76 ಕಿಮೀ ದೂರದಲ್ಲಿರುವ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಲ್ಲೂ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ. ರಸಕ್ತಸ್ರಾವದಿಂದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿತ್ತು' ಎಂದು ಮನೆಯವರು ತಮ್ಮ ಬವಣೆಯನ್ನು ಹೇಳಿಕೊಂಡಿದ್ದಾರೆ.
ಅಲ್ಲಿಂದ ಮುಂದಕ್ಕೆ ಹೈದರಾಬಾದಿನ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಕರಾಚಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೋಷಕರು ಹೇಳಿದ್ದಾರೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಂಸತ್ತಿನಲ್ಲೂ ಈ ಘಟನೆ ಪ್ರತಿಧ್ವನಿಸಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸಂಸತ್ ಸಮಿತಿಯೊಂದನ್ನು ರಚಿಸಲಾಗಿದೆ. ಪಾಕಿಸ್ತಾನದ ಹಳ್ಳಿಗಾಡುಗಳಲ್ಲಿ ಹಿಂದೂಗಳ ಮೇಲೆ ಇಂತಹ ಆತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಿವೆ ಎನ್ನಲಾಗಿದೆ.












Click it and Unblock the Notifications