ಬಿಟ್ಸ್ ವಿದ್ಯಾರ್ಥಿಗಳಿಗೆ ಕೋಟ್ಯಂತರ ರೂ ಪಗಾರ: ಗೂಗಲ್

google-to-pay-1-point-22-cr-bits-3-delhi-pilani-student
ನವದೆಹಲಿ, ಡಿ.14: ಬಿಟ್ಸ್ ಪಿಲಾನಿ ಗೊತ್ತಲ್ಲಾ? ಅದೇ ಬಿರ್ಲಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (BITS) ಎಂಬ ಜಗತ್ಪಸಿದ್ಧ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆ. ಇನ್ನು, ಗೂಗಲ್ ಸಹ ಗೊತ್ತಿರಬೇಕಲ್ಲಾ. ಅದೇ ನೇಮಕಾತಿ, ಸಿಬ್ಬಂದಿ ಸಂಬಳಗಳಲ್ಲಿ ಜಗತ್ತಿನ ಪ್ರಮುಖ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಐಟಿ ಸಂಸ್ಥೆ. ಈ ಸಂಸ್ಥೆಯು ಬಿಟ್ಸ್ ಪಿಲಾನಿಯ ಮೂವರು ವಿದ್ಯಾರ್ಥಿಗಳಿಗೆ 1.22 ಕೋಟಿ ಸಂಬಳ ನೀಡುವ ವಾಗ್ದಾನ ನೀಡಿ, ನೇಮಕಾತಿ ಮಾಡಿಕೊಂಡಿದೆ.

ಭಾರತದಲ್ಲಿ ಈ ಪರಿಯ ದುಬಾರಿ ನೇಮಕಾತಿ ಇದೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗಿದೆ. ಇನ್ನು, ಹಾಗೆ ದುಬಾರಿ ಸಂಬಳಗಳಿಗೆ ನೇಮಕಗೊಂಡ ಅದೃಷ್ಟವಂತ ವಿದ್ಯಾರ್ಥಿಗಳು ಯಾರಪ್ಪ ಅಂದರೆ ಮುಂಬೈನ ರಿಷಬ್ ಕುಮಾರ್ ಅಗರವಾಲ್, ಉತ್ತರ ಪ್ರದೇಶದ ನಿತಿನ್ ಘಂಗಾರ್ ಮತ್ತು ನಾಗ್ಪುರದ ಕುನಾಲ್ ಲಾಡ್.

ಅಂದಹಾಗೆ, ಇವರನ್ನೆಲ್ಲ ಕ್ಯಾಂಪಸ್ ಸೆಲಕ್ಷನ್ ನಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಮೊದಲ ಹಂತದ ಕ್ಯಾಂಪಸ್ ಸೆಲಕ್ಷನ್ ಆದ ಮೇಲೆ ಬೆಂಗಳೂರಿನಲ್ಲಿ ಇವರು ಸಂದರ್ಶನ ಪರೀಕ್ಷೆ ತೆಗೆದುಕೊಂಡಿದ್ದರು. ಇವರನ್ನೆಲ್ಲ ಮೊದಲು ಅಮೆರಿಕದಲ್ಲಿರುವ ಮೌಂಟ್ ವ್ಯೂ ಸಿಟಿ ಯಲ್ಲಿ ತರಬೇತಿಗೆ ಹಚ್ಚಲಾಗುವುದು. ಮುಂದಿನ ಅಕ್ಟೋಬರಿನಿಂದ ಇವರ ಉದ್ಯೋಗ ಶುರುವಾಗುತ್ತದೆ.

ಇದಲ್ಲದೆ ಮಾರ್ಗೊನ್ ಸ್ಟ್ಯಾನ್ಲೆ, ಮೈಕ್ರೋಸಾಫ್ಟ್ ಮತ್ತಿತರ ಪ್ರಮುಖ ಕಂಪನಿಗಳೂ 20 ಲಕ್ಷ ರೂ. ಪ್ಯಾಕೇಜಿನಲ್ಲಿ ನೇಮಕಾತಿಗಳನ್ನು ಮಾಡಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+