ಛೇ! 4 ವರ್ಷದ ಹಸುಳೆ ಮೇಲೆ ಅತ್ಯಾಚಾರ

Mumbai: 4-year-old raped; autorickshaw driver who ferried her to school arrested
ಮುಂಬೈ, ಡಿ.12: ಪ್ರತಿನಿತ್ಯ ಪುಟ್ಟ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋರಿಕ್ಷಾವಾಲನೊಬ್ಬ ಹಸುಳೆ ಮೇಲೆ ಅತ್ಯಾಚಾರಗೈದ ಘೋರ ಘಟನೆ ತಡವಾಗಿ ವರದಿಯಾಗಿದೆ.

ಡೊಂಬಿವಿಲಿ ಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಆಟೋ ಚಾಲಕನೊಬ್ಬ ತನ್ನ ಕಾಮದಾಸೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.

ಘಟನೆ ಬಗ್ಗೆ ತಡವಾಗಿ ತಿಳಿದ ಪೋಷಕರಿಗೆ ಶಾಕ್ ಆಗಿದೆ. ದಿನ ನಿತ್ಯ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದ ಆಟೋ ಚಾಲಕ ರಾಜೇಶ್ ವಮ್ನೆ ಈ ಕೃತ್ಯ ಎಸೆಗಿರುವುದು ಎಂದು ತಿಳಿದು ಗಾಬರಿಯಾಗಿದ್ದಾರೆ.

ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜೇಶ್ ನನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಿದ್ದಿದೆ.

ರಾಜೇಶ್ ಹೇಳುವ ಪ್ರಕಾರ, ಘಟನೆ ನಡೆದಿದ್ದು ನವೆಂಬರ್ ತಿಂಗಳ ಕೊನೆಯಲ್ಲಿ, ಆದರೆ, ಈ ಬಗ್ಗೆ ಬಾಲಕಿ ಹೇಳಿರುವುದಕ್ಕೆ ಸಾಧ್ಯವಿಲ್ಲ. ಘಟನೆ ಬಗ್ಗೆ ಹೇಳದಂತೆ ಹೆದರಿಸಿದ್ದೆ ಎಂದು ರಾಜೇಶ್ ಹೇಳಿದ್ದಾನೆ

ಘಟನೆ ನಡೆಡ ದಿನ ಇತರೆ ಹುಡುಗಿಯರನ್ನು ಮನೆಗೆ ಬಿಟ್ಟ ಮೇಲೆ ಈ ಬಾಲಕಿಯನ್ನು ನನ್ನ ಮನೆಗೆ ಕರೆದುಕೊಂಡು ಹೋದೆ. ಗಲಾಟೆ ಮಾಡದಂತೆ ಚಾಕೊಲೇಟ್ ಕೊಟ್ಟಿದೆ. ಕೆಲವು ಗಂಟೆಗಳ ನಂತರ ಆಕೆಯನ್ನು ಮನೆಗೆ ಬಿಟ್ಟು ಬಂದೆ ಎಂದಿದ್ದಾನೆ.

ಆದರೆ, ಮನೆಗೆ ಹಿಂತಿರುಗಿದ ಮೇಲೆ ಬಾಲಕಿ ಅತ್ತು ಕರೆದು ತನಗೆ ಉಂಟಾದ ನೋವಿನ ಬಗ್ಗೆ ತನಗೆ ತಿಳಿದ ಭಾಷೆಯಲ್ಲಿ ಹೇಳಿದ್ದಾಳೆ. ಅಲ್ಪ ಸ್ವಲ್ಪ ಅರ್ಥ ಮಾಡಿಕೊಂಡ ಬಾಲಕಿಯ ತಾಯಿಗೆ ಆಟೋರಿಕ್ಷಾದವನ ಮೇಲೆ ಅನುಮಾನ ಬಂದಿದೆ.

ಆದರೆ, ಕೇವಲ ಶಂಕೆಯ ಮೇಲೆ ಈ ರೀತಿ ದೊಡ್ಡ ಆರೋಪ ಮಾಡುವುದು ಹೇಗೆ ಎಂದು ಭಾವಿಸಿ ಸುಮ್ಮನಾಗಿದ್ದಾರೆ.

ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ಕೊಂಚ ಏರು ಪೇರಾದ ಕಾರಣ, ಆಸ್ಪತ್ರೆಗೆ ತೆರಳಿದ್ದಾರೆ. ಆಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯರಿಗೆ ತಿಳಿದು ಬಂದಿದೆ. ನಂತರ ತಡ ಮಾಡದೆ ಪೊಲೀಸರಿಗೆ ದೂರು ನೀಡಲಾಗಿದೆ.

ರಾಜೇಶ್ ನನ್ನು ಕಲ್ಯಾಣ್ ಪ್ರದೇಶದ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಘಟನೆ ನಂತರ ಪೋಷಕರು ಯಾರನ್ನು ನಂಬುವುದು ಎಂಬ ಭೀತಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+