6 ರಿಂದ 9 ಸಿಲೆಂಡರ್ ಏರಿಕೆಗೆ ಬ್ರೇಕ್

Veerappa Moily
ನವದೆಹಲಿ, ಡಿ.12: ಸಬ್ಸಿಡಿ ದರದ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಿತಿ ಹೆಚ್ಚಳ ಮಾಡಲು ಮುಂದಾಗಿದ್ದ ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರ ನಿರ್ಧಾರಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.

ಗುಜರಾತ್ ಚುನಾವಣೆ ಮುಂದಿಟ್ಟುಕೊಂಡು ಸರ್ಕಾರ ಇಂಥ ಘೋಷಣೆ ಹೊರಡಿಸುವುದು ಸರಿಯಲ್ಲ್ ಎಂದು ಚುನಾವಣಾ ಆಯೋಗ ಹೇಳಿದೆ.
ವರ್ಷಕ್ಕೆ 6 ಸಿಲಿಂಡರ್‌ಗಳ ಸಂಖ್ಯೆಯನ್ನು 9ಕ್ಕೆ ಏರಿಕೆ ಮಾಡುವ ಕುರಿತು ಸರ್ಕಾರ ಚಿಂತಿಸುತ್ತಿದೆ ಎಂದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ ಅವರಿಗೆ ಚುನಾವಣಾ ಆಯೋಗ ಸ್ವಯಂ ಪ್ರೇರಿತವಾಗಿ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಿದೆ.

ಮೊಯ್ಲಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಚುನಾವಣಾ ಆಯೋಗ, ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಇಂತಹ ಘೋಷಣೆಯನ್ನು ಮಾಡದಂತೆ ಎಚ್ಚರಿಕೆ ನೀಡಿದೆ.

'ಖಂಡಿತವಾಗಿಯೂ ಎಲ್‌ಪಿಜಿ ಸಿಲಿಂಡರ್ ಮಿತಿಯು ಆರರಿಂದ ಒಂಬತ್ತಕ್ಕೆ ಏರಿಕೆ ಆಗುತ್ತದೆ. ಈ ಕುರಿತು ಶೀಘ್ರದಲ್ಲೇ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಮಂಗಳವಾರ ಹೇಳಿದ್ದರು.

ಸಬ್ಸಿಡಿ ಸಹಿತ ಎಲ್‌ಪಿಜಿ ಸರಬರಾಜಿಗೆ ವಿಧಿಸಿರುವ ಮಿತಿಯನ್ನು ಏರಿಕೆ ಮಾಡಿದರೆ ಸರ್ಕಾರ ವಾರ್ಷಿಕವಾಗಿ ರೂ 9000 ಕೋಟಿ ಮೊತ್ತವನ್ನು ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ. ಈ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಅವರೊಂದಿಗೆ ಎರಡು ಸುತ್ತು ಚರ್ಚಿಸಿದ್ದೇನೆ ಎಂದು ಮೊಯ್ಲಿ ಹೇಳಿದ್ದರು.

ಕಡಿಮೆ ದರದಲ್ಲಿ ಇಂಧನ ಮಾರಾಟದಿಂದ ಪೆಟ್ರೋಲಿಯಂ ಇಲಾಖೆಗೆ ಆಗಿರುವ ನಷ್ಟ ಭರಿಸಲು ಕೇಂದ್ರ ಹಣಕಾಸು ಇಲಾಖೆಯಿಂದ ಸುಮಾರು 55,000 ಕೋಟಿ ಹಣ ಕೇಳಲಾಗಿದೆ ಎಂದರು.

ಒಂದು ಕುಟುಂಬಕ್ಕೆ ವಾರ್ಷಿಕವಾಗಿ ಆರು ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ ನೀಡಬೇಕು ಎಂಬ ನಿರ್ಧಾರವನ್ನು ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಸೆ. 13ರಂದು ಕೈಗೊಂಡಿತ್ತು. ಇದನ್ನು ಕೇಂದ್ರ ಸಂಪುಟ ಅನುಮೋದಿಸಿತ್ತು' ಎಂದು ಮೊಯ್ಲಿ ಹೇಳಿದ್ದರು.

ವರ್ಷಕ್ಕೆ 6 ಸಿಲೆಂಡರ್ ಬಳಸುವವರ ಸಂಖ್ಯೆ ಶೇ 6ರಷ್ಟು ಮಾತ್ರ ಇದೆ. ಉಳಿದಂತೆ 9 ರಿಂದ 12 ಸಿಲೆಂಡರ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಅಧಿಕವಾಗಿದೆ.

ರೀಟೈಲರ್ ಗಳಿಗೆ ಪ್ರತಿ ಲೀಟರ್ ಮಾರಾಟದಿಂದ ಡೀಸೆಲ್ ಗೆ 10.03 ರು ಹಾಗೂ ಸೀಮೆಎಣ್ಣೆ 30.93 ರು ಮತ್ತು 14.2 ಕೆಜಿ ಸಿಲೆಂಡರ್ ಪ್ರತಿ ಮಾರಾಟದಿಂದ 520.50 ರು ನಷ್ಟವಾಗುತ್ತದೆ ಎಂದು ಮೊಯ್ಲಿ ಹೇಳಿದ್ದಾರೆ. ಎಲ್ ಪಿಜಿ ಸಿಲೆಂಡರ್ ಬೆಲೆ 410.50 ರು ಇದ್ದು, ಹೆಚ್ಚುವರಿ ಸಿಲೆಂಡರ್ ಬೆಲೆ 931 ರು ದಾಟುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+