ಜೆಸಿಂತಾ ಸಾವಿಗೆ 2 ಕೋಟಿ ರು ಪರಿಹಾರ ಘೋಷಣೆ?

ಲಂಡನ್, ಡಿ.11: ಇಲ್ಲಿನ ಏಳನೆಯ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕದ ಮಂಗಳೂರು ಮೂಲದ ಜೆಸಿಂತಾ ಸಲ್ದಾನರ ನಿಗೂಢ ಸಾವಿಗೆ ಸಂಬಂಧಿಸಿದ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆಸ್ಟ್ರೇಲಿಯದ 2ಡೇಎಫ್‌ಎಂ ಹೇಳಿದೆ. ಕುಚೋದ್ಯ ಕರೆ ಮಾಡಿ ವಿವಾದದಲ್ಲಿ ಸಿಲುಕಿಕೊಂಡಿರುವ ಎಫ್‌ಎಂ ಆರ್ ಜೆ ಗಳು ಕೂಡಾ ಕ್ಷಮೆಯಾಚಿಸಿದ್ದಾರೆ.

ಇದೀಗ ಬಂದ ಸುದ್ದಿ: ಈ ನಡುವೆ ಜೆಸಿಂತಾ ಕುಟುಂಬಕ್ಕೆ ಪರಿಹಾರ ಧನದ ರೂಪದಲ್ಲಿ $500,000 ನೀಡಲು ಆಸ್ಟ್ರೇಲಿಯಾದ ರೇಡಿಯೋ ಮುಂದೆ ಬಂದಿದೆ ಎಂಬ ಸುದ್ದಿ ಇದೆ. ಆದರೆ, ಜೆಸಿಂತಾ ಕುಟುಂಬಕ್ಕೆ ಈ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

'ಕಳೆದ ಕೆಲವು ದಿನಗಳಿಂದೀಚೆಗೆ ಸಂಭವಿಸಿರುವ ಘಟನೆಗಳಿಂದ ನಮಗೆ ಬಹಳ ನೋವಾಗಿದೆ. ನಿಜವಾಗಿಯೂ ಇದೊಂದು ದೊಡ್ಡ ದುರಂತವಾಗಿದೆ. ಜೆಸಿಂತಾರ ನಿಗೂಢ ಸಾವಿಗೆ ಸಂಬಂಧಿಸಿದ ಸಮಗ್ರ ತನಿಖೆಗೆ ಸರ್ವರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ' ಎಂದು ರೇಡಿಯೊ ಕೇಂದ್ರದ ಮುಖ್ಯಸ್ಥರು ಆಸ್ಪತ್ರೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Aus radio station assures cooperation

ಗರ್ಭಿಣಿಯಾಗಿರುವ ಯುವರಾಣಿ ಕೇಟ್ಸ್‌ರ ಆರೋಗ್ಯ ವಿಚಾರಿಸಿ ಬಂದ ಕರೆಯನ್ನು ಸ್ವೀಕರಿಸಿ ತನ್ನ ಸಹೋದ್ಯೋಗಿಗೆ ನೀಡಿದ್ದ ಜೆಸಿಂತಾ ಸಲ್ದಾನ ಮೂರು ದಿನಗಳ ಬಳಿಕ ಪಕ್ಕದ ದಾದಿಯರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. 2ಡೇಎಫ್‌ಎಂ ಕೇಂದ್ರದ ಆರ್ ಜೆಗಳು ರಾಣಿ ಎಲಿಜಬೆತ್ ಹಾಗೂ ಯುವರಾಜ ಚಾರ್ಲ್ಸ್‌ರಂತೆ ಅಭಿನಯಿಸಿ ಕರೆ ಮಾಡಿ ಕೇಟ್‌ರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದರು.

ಘಟನೆಗೆ ಸಂಬಂಧಿಸಿ ರೇಡಿಯೊ ನಿರೂಪಕರಾದ ಮೈಕೆಲ್ ಕ್ರಿಶ್ಚಿಯನ್ ಹಾಗೂ ಮೆಲ್‌ಗ್ರೆಗ್ ವಿರುದ್ಧ ಆಸ್ಟ್ರೇಲಿಯ ಹಾಗೂ ಬ್ರಿಟನ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಗೊಂಡಿದೆ.

2ಡೇ ಎಫ್‌ಎಂ ಕೇಂದ್ರವು ಸೋಮವಾರ ತನ್ನ ಇಬ್ಬರು ನಿರೂಪಕರನ್ನೂ ಮಾಧ್ಯಮದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಅವರು ಘಟನೆಗೆ ಸಂಬಂಧಿಸಿ ಕ್ಷಮೆ ಕೋರಿದ್ದಾರೆ.

ಜೆಸಿಂತಾ ಪತಿಗೆ ಕಿರುಕುಳ?: ನಿಗೂಢವಾಗಿ ಸಾವನ್ನಪ್ಪಿರುವ ಜೆಸಿಂತಾ ಸಲ್ಡಾನರ ಪತಿಗೆ ಲಂಡನ್ ಪೊಲೀಸರು ವಿಚಾರಣೆಯ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.

ಜೆಸಿಂತಾ ಸಾವನ್ನಪ್ಪಿದ ಒಂದು ದಿನದ ಬಳಿಕ ಲಂಡನ್ ಹೊರ ವಲಯದಲ್ಲಿರುವ ಪತಿ ಬೆನಡಿಕ್ಟ್ ಬಾರ್ಬೋಜಾಗೆ ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ಜೆಸಿಂತಾ ಮೃತದೇಹ ನೋಡಲು ಬೆನಡಿಕ್ಟ್ ಗೆ ಅವಕಾಶ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.,

ತನಿಖೆಗೆ ಒತ್ತಾಯ: ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಧರ್ಮಗುರು ಡೆನಿಸ್ ಮೊರಾಸ್ ಪ್ರಭು, ಜೆಸಿಂತಾ ಸಾವಿನ ಬಗ್ಗೆ ಕೂಲಂಕುಷ ತನಿಖೆ ಆಗಬೇಕು ಎಂದು ಬ್ರಿಟನ್ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಭಾರತೀಯ ರಾಯಭಾರಿ ಕಚೇರಿ ಮೂಲಕ ಅಲ್ಲಿನ ಸರ್ಕಾರವನ್ನು ಸಂಪರ್ಕಿಸಿ ಮೃತಳಿಗೆ ಹಾಗೂ ಅವರ ಕುಟುಂಬಕ್ಕೆ ಉಂಟಾದ ಅನ್ಯಾಯ ಸರಿಪಡಿಸಬೇಕು. ಮೃತದೇಹವನ್ನು ಕುಟುಂಬಕ್ಕೆ ಬಿಟ್ಟುಕೊಡಬೇಕು ಎಂದು ಮೊರಾಸ್ ಒತ್ತಾಯಿಸಿದರು.

ಈ ನಡುವೆ ಯುವರಾಣಿ ಕೇಟ್ ಮಿಡ್ಲ್ ಟನ್ ಅವರಿಗೆ ಹುಟ್ಟುವ ಮಗುವಿಗೆ ಜೆಸಿಂತಾ ಬಾರ್ಬೋಜಾ ಅವರ ಹೆಸರನ್ನಿಡುವಂತೆ ರಾಜ ಮನೆತನಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ, ಕೇಂಬ್ರಿಡ್ಜ್ ನ ಡ್ಯೂಕ್ ಹಾಗೂ ಡಚ್ಚೆಸ್ ಅವರಿಗೆ ಜೆಸಿಂತಾ ಸಾವಿನ ವಿಷಯ ತಿಳಿದು ತೀವ್ರ ದುಃಖವಾಗಿದೆ ಎಂದು ಸೈಂಟ್ ಜೇಮ್ಸ್ ಅರಮನೆಯಿಂದ ವಿಷಾದದ ಹೇಳಿಕೆ ಬಿಟ್ಟರೆ ಮತ್ತೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+