ಬ್ಯಾಂಕ್ ಅಡ್ರೆಸ್ ಪ್ರೂಫ್ ಗೆ ಆಧಾರ್ ಸಾಕು

Aadhaar is valid as ID
ನವದೆಹಲಿ, ಡಿ.11: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಗ್ರಾಹಕ ಸ್ನೇಹಿ ನಿರ್ಣಯಗಳನ್ನು ಕೈಗೊಂಡಿದೆ. ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಆರಂಭದ ಪ್ರಕ್ರಿಯೆಯಲ್ಲಿ ಬದಲಾವಣೆ ಇದರಲ್ಲಿ ಪ್ರಮುಖವಾಗಿದೆ.

ಈ ಹಿಂದೆ ಬ್ಯಾಂಕ್ ಖಾತೆ ಆರಂಭ ಮಾಡಲು ಪ್ರತ್ಯೇಕ ದಾಖಲಾತಿಗಳು, ಐಡೆಂಡಿಟಿ ಪ್ರೂಫ್(ಪಾಸ್ ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವರ್ಸ್ ಲೈಸನ್ಸ್.ಇತ್ಯಾದಿ) ಹಾಗೂ ವೈಯಕ್ತಿಕ ವಿಳಾಸ ದೃಢೀಕರಣ ಕಡ್ಡಾಯವಾಗಿತ್ತು.

ಎರಡು ಪ್ರತಿ ದಾಖಲಾತಿ ಸಲ್ಲಿಕೆ, ವಿಳಾಸದಲ್ಲಿ ವ್ಯತ್ಯಾಸ ಮುಂತಾದ ಸಮಸ್ಯೆಯಿಂದ ಗ್ರಾಹಕರು ಬ್ಯಾಂಕ್ ಖಾತೆ ಆರಂಭಿಸುವುದೇ ಕಷ್ಟದ ಕೆಲಸ ಎಂದು ಗೊಣಗುತ್ತಿದ್ದರು.

ಆದರೆ, ಹೊಸ ನಿಯಮದಂತೆ ಖಾತೆ ಆರಂಭಿಸುವ ಅರ್ಜಿಯಲ್ಲಿ ನೀಡಿದ ಅಡ್ರೆಸ್ ಪ್ರೂಫ್ ಗಾಗಿ ಕಷ್ಟ ಪಡಬೇಕಿಲ್ಲ. ಐಡೆಂಡಿಟಿ ಪ್ರೂಫ್ ಗಾಗಿ ನೀಡುವ ದಾಖಲೆ(ಪಾಸ್ ಪೋರ್ಟ್ ಇತ್ಯಾದಿ) ಅಡ್ರೆಸ್ ಹಾಗೂ ಖಾತೆ ಆರಂಭದ ಅರ್ಜಿ ಯಲ್ಲಿರುವ ಅಡ್ರೆಸ್ ಒಂದೇ ಆಗಿದ್ದರೆ ಪ್ರತ್ಯೇಕ ಅಡ್ರೆಸ್ ಪ್ರೂಫ್ ನೀಡುವ ಅಗತ್ಯವಿಲ್ಲ.

ಒಂದು ವೇಳೆ ಬೇರೆ ಅಡ್ರೆಸ್ ನಲ್ಲಿದ್ದರೆ ಆಗ ಮಾತ್ರ ಪ್ರತ್ಯೇಕ ವಿಳಾಸ ದೃಢೀಕರಣ ದಾಖಲೆ ಒದಗಿಸಬೇಕಾಗುತ್ತದೆ. ಈಗ ರೆಂಟೆಂಡ್ ಅಗ್ರೀಮೆಂಟ್ ಕೂಡಾ ಅಡ್ರೆಸ್ ಪ್ರೂಫ್ ಗೆ ಬಳಸಬಹುದಾಗಿದೆ.

ಖಾತೆ ಆರಂಭಿಸಲು ಯಾರ ನೆರವು ಬೇಕಿಲ್ಲ: ಬ್ಯಾಂಕಿನಲ್ಲಿ ಹೊಸ ಖಾತೆ ಆರಂಭಿಸಬೇಕಾದರೆ ಬ್ಯಾಂಕಿನಲ್ಲಿ ಈಗಾಗಲೇ ಖಾತೆ ಹೊಂದಿರುವ ಗ್ರಾಹಕರು ಹೊಸ ಗ್ರಾಹಕರನ್ನು ಪರಿಚಯಿಸಬೇಕಾಗಿತ್ತು. ಹಲವು ಬ್ಯಾಂಕ್ ಗಳಲ್ಲಿ ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಈ ರೀತಿ ಹೊಸ ಗ್ರಾಹಕರಿಗೆ ಹಳೆ ಗ್ರಾಹಕರ ನೆರವು ಬೇಕಾಗಿತ್ತು.

ಅದರೆ, ಈಗ ಹೊಸ ಗ್ರಾಹಕರಿಗೆ ಈ ರೀತಿ ಹಳೆ ಗ್ರಾಹಕರ ನೆರವು ಪಡೆಯಿರಿ ಎಂದು ಬ್ಯಾಂಕ್ ಗಳು ಕೇಳುವಂತಿಲ್ಲ

KYCಗಾಗಿ ಆಧಾರ್ ಸಾಕು: ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ನಲ್ಲಿ ಐಡೆಂಡಿಟಿ ಹಾಗೂ ವಿಳಾಸ ಪ್ರೂಫ್ ಆಗಿ ನೀಡಬಹುದು. ಬ್ಯಾಂಕಿನಲ್ಲಿ ಸಣ್ಣ ಉಳಿತಾಯ ಖಾತೆ ಆರಂಭಿಸಲು NREGA ಜಾಬ್ ಕಾರ್ಡ್ ಅಧಿಕೃತ ದಾಖಲೆಯಾಗಿ ಬಳಸಬಹುದು ಎಂದು ಆರ್ ಬಿಐ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+