ಬೆಂಗಳೂರಿಗರೇ, ಭೀಕರ ನೀರಿನ ಸಮಸ್ಯೆಗೆ ಸಜ್ಜಾಗಿ !

ಇದುವರೆಗೆ ಬೆಂಗಳೂರು ನಗರಕ್ಕೆ ನೀರಿನ ಸರಬಾರಿಜಿನಲ್ಲಿ ಯಾವುದೇ ತೊಂದರೆ ಉಂಟಾಗುತ್ತಿರಲಿಲ್ಲ. ಆದರೆ ಶುಕ್ರವಾರ (ಡಿ 7) ನಡೆದ ಕಾವೇರಿ ಪ್ರಾಧಿಕಾರದ ತೀರ್ಪು ರಾಜ್ಯದ ವಿರುದ್ದ ಬಂದಿದೆ. ಈ ತೀರ್ಪೇ ಅಂತಿಮವಾದರೆ ನಗರದ ಜನತೆಗೆ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆ ಮಾಡಲು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ನಗರ ಮತ್ತು ಇತ್ತೀಚಿಗೆ ಬಿಬಿಎಂಪಿಗೆ ಸೇರ್ಪಡೆಗೊಂಡ ಪ್ರದೇಶಗಳ ಮೇಲೂ ಇದರ ಪರಿಣಾಮ ಬೀರಲಿದೆ. ಬೆಂಗಳೂರು, ಮೈಸೂರು ಮತ್ತು ಕಾವೇರಿ ಭಾಗದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರು ನಗರಕ್ಕೆಂದು ಮೀಸಲಾಗಿಟ್ಟಿದ್ದ ನೀರು ತಮಿಳುನಾಡಿಗೆ ಹರಿದು ಹೋಗುತ್ತಿರುವುದರಿಂದ ಮತ್ತು ಮುಂದಿನ ದಿನದಲ್ಲಿ ಪ್ರಾಧಿಕಾರದ ತೀರ್ಪನ್ನು ಕರ್ನಾಟಕ ಸರಕಾರ ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲ್ಲಿ ಬೆಂಗಳೂರು ನಗರಕ್ಕೆ ಭೀಕರ ನೀರಿನ ಸಮಸ್ಯೆ ಉಂಟಾಗುವುದಂತೂ ಖಂಡಿತ.
ಬೆಂಗಳೂರು ನಗರಕ್ಕೆ ಜುಲೈ ತಿಂಗಳವರೆಗೆ 12 ಟಿಎಂಸಿ ನೀರು ಬೇಕು. ಈಗ ಅದೇ ನೀರು ತಮಿಳುನಾಡಿಗೆ ಹರಿಯುತ್ತಿರುವುದರಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣವನ್ನು ಕಮ್ಮಿ ಮಾಡದೇ ಬೇರೆ ದಾರಿಯಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications