ಜಪಾನಿನಲ್ಲಿ ಭೂಕಂಪ, ಸುನಾಮಿ ಕಾಟ, ಪ್ರಳಯದ ಭೀತಿ

ಪ್ರಳಯದ ಭೀತಿ: ಕಳೆದ ವರ್ಷ (2011 ಮಾರ್ಚ್ 11) ಸಂಭವಿಸಿದ ಸುನಾಮಿ ವೇಳೆಯೂ ಇದೇ ಪ್ರಮಾಣದ ಭೂಕಂಪ ಸಂಭವಿಸಿತ್ತು. ಈಗಾಗಲೇ 21-12-2012ರ ಪ್ರಳಯದ ಭೀತಿಯಲ್ಲಿರುವ ಜನಕ್ಕೆ ಇದರಿಂದ ಇದರಿಂದ ಆಘಾತವಾಗಿದೆ. ಅದರಲ್ಲೂ ಡಿಸೆಂಬರಿನಲ್ಲೇ ಈ ಭೂಕಂಪ ಸಂಭವಿಸಿರುವುದು ಭಾರತೀಯರಲ್ಲಿ ಆತಂಕ ಮನೆ ಮಾಡಿದೆ.
ಆದರೆ ತಕ್ಷಣಕ್ಕೆ ಈ ಭೂಕಂಪದಿಂದ ಏನಾದರೂ ಅನಾಹುತ ಸಂಭವಿಸಿದೆಯಾ ಅಂದರೆ ಅಂತಹುದೇನೂ ಘಟನೆಗಳು ಸದ್ಯಕ್ಕೆ ವರದಿಯಾಗಿಲ್ಲ. ಆದರೆ 1 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುತ್ತಿದ್ದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ಜಪಾನ್ ರಾಜಧಾನಿ ಟೋಕಿಯೋದಿಂದ 180 ಕಿಮೀ ದೂರದಲ್ಲಿ ಪೂರ್ವ ಕರಾವಳಿಯಲ್ಲಿ ಈ ಪ್ರಬಲ ಭೂಕಂಪ ಕಂಡುಬಂದಿದೆ.
ಸಿಡ್ನಿ ವರದಿ: ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರೇ ಡಿ. 21ಕ್ಕೆ ಪ್ರಳಯ ನಡೆಯೋದು ಖಚಿತ ಎಂದು ನಿನ್ನೆಯಷ್ಟೇ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications