ಬೆಂಗಳೂರು: ಮಣಿಪುರಿ ಮಹಿಳೆ ಮೇಲೆ ಹಲ್ಲೆ

ಆದರೆ, ಹಲ್ಲೆಗೆ ಸಾಕ್ಷಿಯಾಗಿದ್ದ ಪೊಲೀಸ್ ಪೇದೆಯೊಬ್ಬ ಮಹಿಳೆಯನ್ನೇ ದಬಾಯಿಸಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಮಣಿಪುರ ಮಹಿಳೆ ಬೆಂಗಳೂರಿನ ಬಗ್ಗೆ ತುಂಬಾ ಬೇಸರದಿಂದ ಮಾತನಾಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?: ಮಣಿಪುರದ ಮಹಿಳೆ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಗಳು ಕಾರಿಗೆ ಗುದ್ದಿದ್ದಾರೆ. ಬೈಕು ಸವಾರರನ್ನು ಪ್ರಶ್ನಿಸಲು ತೊಡಗಿದ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ.
ಜನಾಂಗೀಯ ನಿಂದನೆ, ಅವಾಚ್ಯ ಶಬ್ದಗಳು ಹರಿದಾಡಿದೆ. ಸಂಚಾರ ದಟ್ಟಣೆ ಅಧಿಕವಾದ ಕಾರಣ ಈ ಗಲಾಟೆ ನೋಡಿದ ಟ್ರಾಫಿಕ್ ಪೊಲೀಸ್, ಮಹಿಳೆಯನ್ನು ದಬಾಯಿಸಿದ್ದಾರೆ.
ಬೈಕು ಸವಾರರು ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಟ್ರಾಫಿಕ್ ಕಾನ್ಸ್ ಟೇಬಲ್ ಎಲ್ಲವನ್ನೂ ನೋಡಿ ಕೂಡಾ ಸುಮ್ಮನಿದ್ದರು ಎಂದು ಒಂದು ದೂರು ಹಾಗೂ ನನ್ನ ಕಾರಿಗೆ ಬೇಕೆಂತಲೇ ಬೈಕು ಸವಾರರು ಗುದ್ದಿದ್ದಾರೆ ಎಂದು ಎರಡನೇ ದೂರನ್ನು ಮಹಿಳೆ ನೀಡಿದ್ದಾರೆ.












Click it and Unblock the Notifications