ಮಗನನ್ನು ಶಿಕ್ಷಿಸಿದ ಆಂಧ್ರ ಟೆಕ್ಕಿ ದಂಪತಿಗೆ ಕೊನೆಗೂ ಶಿಕ್ಷೆ

ನಾರ್ವೆ ಟಿಸಿಎಸ್ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕೃಷ್ಣಾ ಜಿಲ್ಲೆಯ ದೊಂಡಪಡುವಿನ ಚಂದ್ರಶೇಖರ್ ಮತ್ತು ಅವರ ಪತ್ನಿಯನ್ನು ಪ್ರಕರಣದ ಸಂಬಂಧ ನಾರ್ವೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ದಂಪತಿ ತಮ್ಮ ಮಗುವಿಗೆ ಚಿತ್ರಹಿಂಸೆ ನೀಡಿದೆ. ಬೆಲ್ಟಿನಿಂದ ಬಾರಿಸಿದ್ದಾರೆ. ಮಗುವಿನ ಮೈಮೇಲೆ ಬಾಸುಂಡೆ ಬಂದಿದೆ. ಮಗುವಿನ ದೇಹದ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ದಂಪತಿ ಮಗುವಿಗೆ ಶಿಕ್ಷೆ ನೀಡಿರುವ ಬಗ್ಗೆ ಅನುಮಾನಕ್ಕೆ ಎಡೆಯಿಲ್ಲದಂತೆ ನಾರ್ವೆ ಪೊಲೀಸರ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನು ಆಲಿಸಿದ ಕೋರ್ಟ್ ಇಂದು ತೀರ್ಪು ನೀಡಿದೆ. ಅದರಂತೆ ತಾಯಿ ಅನುಪಮಾಗೆ ಒಂದೂ ಕಾಲು ವರ್ಷ ಮತ್ತು ತಂದೆ ವಲ್ಲಭನೇನಿ ಚಂದ್ರಶೇಖರಗೆ ಒಂದೂವರೆ ವರ್ಷ ಜೈಲುವಾಸ ಶಿಕ್ಷೆ ವಿಧಿಸಲಾಗಿದೆ.












Click it and Unblock the Notifications