ಪತ್ನಿ ಜತೆ ಬಲವಂತದ ಸಂಭೋಗ ಅತ್ಯಾಚಾರ ಅಲ್ಲ
ನವದೆಹಲಿ,
ಡಿ.4: ಜತೆಗಾತಿಯ ಸಹಕಾರ/ಸಹಮತವಿಲ್ಲದೆ ಆಕೆಯೊಂದಿಗೆ ಬಲವಂತವಾಗಿ ಸಂಭೋಗ ಮಾಡಿದರೆ ಅದು ಅತ್ಯಾಚಾರವೆಂದು ಪರಿಗಣಿತವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಈ ಸಂಬಂಧ ಅತ್ಯಾಚಾರ ಆರೋಪಕ್ಕೀಡಾಗಿದ್ದ ಪುರುಷನೊಬ್ಬನನ್ನು ಆರೋಪಮುಕ್ತಗೊಳಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. id="toptextpromo">ಭಾರತೀಯ
ದಂಡ ಸಂಹಿತೆ ಪ್ರಕಾರ 'ವಿವಾಹ ಸಂಬಂಧದಲ್ಲಿ ಅತ್ಯಾಚಾರ' ಎಂಬುದನ್ನು ಪರಿಗಣಿಸಿಲ್ಲ. ಹಾಗಾಗಿ ತಮ್ಮ ಕಕ್ಷಿದಾರನನ್ನು ಆರೋಪ ಮುಕ್ತಗೊಳಿಸಬೇಕು ಎಂದು ವಕೀಲರೊಬ್ಬರು ಕೋರ್ಟಿಗೆ ಅಲವತ್ತುಕೊಂಡಿದ್ದರು. ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಜೆಆರ್ ಆರ್ಯನ್ ಅವರು ಹಾಜಿ ಅಹಮದ್ ಸಯೀದ್ ಗೆ ಪ್ರಕರಣದಲ್ಲಿ ಜೀವದಾನ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ
ಪ್ರಕರಣದಲ್ಲಿ ಇನ್ನಿತರ ಆರೋಪಗಳ ಕುರಿತು ಕೆಳ ನ್ಯಾಯಾಲಯವೇ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.'ತನ್ನ ಮೊದಲ ಪತಿ ಮರಣ ಹೊಂದಿದ ನಂತರ ಆರೋಪಿ ಸಯೀದ್ ತನ್ನ ಮನೆಗೆ ಬರಲಾರಂಭಿಸಿದ. ತನ್ನ ಮೇಲೆ ಅನುಕಂಪ ತೋರಿಸುತ್ತಾ ಮದುವೆಗೆ ಪುಸಲಾಯಿಸಿದ. ಆ ವೇಳೆ ಬಲವಂತವಾಗಿ ಸಂಭೋಗ ಮಾಡಿದ್ದ' ಎಂದು ಮಹಿಳೆಯೊಬ್ಬರು 2007ರಲ್ಲಿ ದೂರಿದ್ದರು.












Click it and Unblock the Notifications