ಬೆಂಗಳೂರಲ್ಲಿ ಎಲ್ ಕೆಜಿ ಶಿಶು ಮೇಲೆ ಅತ್ಯಾಚಾರ ಯತ್ನ

ನಾಗರಭಾವಿ ಎರಡನೇ ಹಂತದಲ್ಲಿರುವ ಸೈಂಟ್ ಸೋಫಿಯಾ ಶಾಲೆಯ ಎಲ್ ಕೆ ಜಿ ವಿದ್ಯಾರ್ಥಿನಿ ಮೇಲೆ ಶಾಲಾ ಕ್ಯಾಬ್ ಕ್ಲೀನರ್ ಅತ್ಯಾಚಾರ ಎಸೆಗಿದ್ದಾನೆ ಎನ್ನಲಾಗಿದೆ.
ಸೋಮವಾರ ಸಂಜೆ ಆಟವಾಡಲು ಮೈದಾನಕ್ಕೆ ಮಕ್ಕಳನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಎಲ್ ಕೆಜಿ ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯ ಹಿಂಬದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಂಗಳವಾರ ಬೆಳಗ್ಗೆ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅತ್ಯಾಚಾರ ಯತ್ನ ಸಾಬೀತಾಗಿದೆ ಎಂದು ತಿಳಿದು ಬಂದಿದೆ. ಆದರೆ, ಮಗು ಇನ್ನೂ ಸ್ಪಷ್ಟವಾಗಿ ನಡೆದ ಘಟನೆ ಬಗ್ಗೆ ಏನ್ನನ್ನೂ ಹೇಳಿದಿರುವುದು ಪ್ರಕರಣವನ್ನು ಗೊಂದಲಕ್ಕೆ ದೂಡಿದೆ.
ಈ ನಡುವೆ ನಾಪತ್ತೆಯಾಗಿದ್ದ ಗುಲ್ಬರ್ಗಾ ಮೂಲದ ಆರೋಪಿ ಸಾಬಣ್ಣನನ್ನು ಬಂಧಿಸುವಲ್ಲಿ ಜ್ಞಾನಭಾರತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಬಣ್ಣನೇ ಈ ಕೃತ್ಯ ಎಸೆಗಿದ್ದಾನಾ? ಅಥವಾ ಬೇರೆ ಯಾರಾದರೂ ಎಸೆಗಿದ್ದಾರಾ ಇನ್ನೂ ಸ್ಪಷ್ಟವಾಗಿಲ್ಲ. ವಿಚಾರಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ಪೋಷಕರು ಹಾಗೂ ಸ್ಥಳೀಯ ನಾಗರೀಕರು ಸೈಂಟ್ ಸೋಫಿಯಾ ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ತನಿಖೆಗೆ ಸಹಕರಿಸುವುದಾಗಿ ಶಾಲಾ ಆಡಳಿತ ಮಂಡಳಿ ಹೇಳಿದೆ.
ಘಟನೆ ವಿವರ: ಗುಲ್ಬರ್ಗಾದವನಾದ ಆರೋಪಿ ಸಾಬಣ್ಣ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬೆಳಗ್ಗೆ ಬಸ್ ಕ್ಲೀನರ್ ಮತ್ತು ರಾತ್ರಿ ಶಾಲೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಶಾಲಾ ಆವರಣದಲ್ಲೇ ಉಳಿದು ಕೊಳ್ಳುವುದಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.
ಏನೂ ಅರಿಯದ ಬಾಲಕಿಗೆ ಕಳೆದ 1 ತಿಂಗಳಿನಿಂದಲೇ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆದರೆ, ಈ ಬಗ್ಗೆ ಹೇಳಲು ಬಾಲಕಿಗೆ ತಿಳಿಯದ ಕಾರಣ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.
ಬಸ್‌ನಲ್ಲಿ ಮನೆಯಿಂದ ಶಾಲೆಗೆ ಕರೆದುಕೊಂಡು ಬರುವಾಗ ಮತ್ತು ವಾಪಸ್ ಕರೆದೊಯ್ಯುವಾಗ ಮಗುವಿನ ಜೊತೆಗೆ ಆರೋಪಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಆದರೆ ಆ ಬಾಲಕಿ ಈ ವಿಚಾರವನ್ನು ತಂದೆ-ತಾಯಿ ಬಳಿ ಹೇಳಿಕೊಂಡಿಲ್ಲ. ಶಾಲಾ ಶಿಕ್ಷಕರು ಕೂಡ ಈ ಕುರಿತು ಗಮನಹರಿಸಿಲ್ಲ.
ಮನೆಗೆ ಹೋದ ಬಾಲಕಿ ಅಸ್ವಸ್ಥಗೊಂಡಿದ್ದು, ಇದರಿಂದ ಆತಂಕಗೊಂಡ ತಾಯಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.












Click it and Unblock the Notifications