BMTC ಬಸ್ಸಿಗೆ 1647 ಚಾಲಕ-ನಿರ್ವಾಹಕರು ಬೇಕಾಗಿದ್ದಾರೆ
ಬೆಂಗಳೂರು, ಡಿ.4: ಮಹಾನಗರದಲ್ಲಿ ಸಂಚರಿಸುವ BMTC ಬಸ್ಸುಗಳಿಗೆ ಒಟ್ಟು 1647 ಚಾಲಕ-ನಿರ್ವಾಹಕರು ಬೇಕಾಗಿದ್ದು, ಸಂಸ್ಥೆಯು ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 418 ಹುದ್ದೆಗಳು ಸೇರಿದಂತೆ ಒಟ್ಟು 1647 ಚಾಲಕ-ನಿರ್ವಾಹಕರ ನೇಮಕಾತಿ ನಡೆಯಲಿದೆ.
ನೇರ ನೇಮಕಾತಿ ಸಂಸ್ಥೆಯಲ್ಲಿ ಖಾಲಿಯಿರುವ ಚಾಲಕ ಮತ್ತು ನಿರ್ವಾಹಕ ಹುದ್ದೆಗಳನ್ನು ಭರ್ತಗೊಳಿಸುವ ಸಂಬಂಧ Bangalore Metropolitan Transport Corporation ಇಂದು ಜಾಹೀರಾತು ಹೊರಡಿಸಿದೆ.
2012ರ ಡಿಸೆಂಬರ್ 10ರಿಂದ 2013ರ ಜನವರಿ 12 ರವರೆಗೆ ಅಂತರ್ಜಾಲದ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ವಿದ್ಯಾರ್ಹತೆ, ವಯೋಮಿತಿ, ದೈಹಿಕ ಸಾಮರ್ಥ್ಯ, ಹುದ್ದೆಗಳ ವರ್ಗೀಕರಣ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಸಂಪೂರ್ಣ ವಿವರಗಳನ್ನು www.bmtccareers.com ವಿಳಾಸದಲ್ಲಿ ನೀಡಲಾಗಿದೆ. ತಡವೇಕೆ, ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕ/ನಿರ್ವಾಹಕರಾಗುವ ಇಚ್ಛೆಯಿದ್ದಲ್ಲಿ apply ಮಾಡಿ, ನಮ್ಮ ಕಡೆಯಿಂದ All the Best ನಿಮಗಾಗಿ!













Click it and Unblock the Notifications