ಕಳೆದ ಚುನಾವಣೆಯಲ್ಲಿ ಲಕ್ಷಾಧೀಶ ಈಗ ಕೋಟ್ಯಧೀಶ:ಮೋದಿ

ಅಂದರೆ 5 ವರ್ಷದಲ್ಲಿ ಮೂರು ಪಟ್ಟು (ಶೇ. 212) ಆಸ್ತಿ ವೃದ್ಧಿಯಾಗಿದೆ. ಇಲ್ಲಿನ ಮಣಿನಗರ ವಿಧಾನಸಭಾ ಕ್ಷೇತ್ರದಿಂದ ಶುಕ್ರವಾರ ನಾಮ ಪತ್ರ ಸಲ್ಲಿಸಿದ ಮೋದಿ, ಚುನಾವಣೆಗೆ ಸಲ್ಲಿಸಿರುವ ಆಸ್ತಿ ಪ್ರಮಾಣ ಪತ್ರದಲ್ಲಿ ಮೋದಿ ಈ ಮಾಹಿತಿ ನೀಡಿದ್ದಾರೆ.
2007ರಲ್ಲಿ ಬ್ಯಾಂಕ್ ಡೆಪಾಸಿಟ್ - 8.55 ಲಕ್ಷ ರೂ ಮತ್ತು NSC 3.39 ಲಕ್ಷ ರೂ. ಇತ್ತು. ಈಗ 2012ರ ವೇಳೆಗೆ ಬ್ಯಾಂಕ್ ಡೆಪಾಸಿಟ್ - 4.65 ಲಕ್ಷ ರೂ. FD 22.59 ಲಕ್ಷ ರೂ. ಅಂಚೆ ಉಳಿತಾಯ ಖಾತೆಗಳಲ್ಲಿ 4 ಲಕ್ಷ ರೂ. ಮೂಲಸೌಕರ್ಯ ಬಾಂಡ್ ಗಳಲ್ಲಿ 20,000 ರೂ. ಹೂಡಿಕೆ.
ಆದರೆ 2007ರಲ್ಲಿ 45 ಗ್ರಾಂ ತೂಕದ 3 ಚಿನ್ನದ ಉಂಗುರಗಳು ಇದ್ದವು. ಅವುಗಳ ಸಂಖ್ಯೆ ಈಗ ನಾಲ್ಕಕ್ಕೇರಿದೆ. 2007ರಲ್ಲಿ ಗಾಧಿನಗರ ಸೆಕ್ಟರ್-1 ರಲ್ಲಿ 30 ಲಕ್ಷ ರೂ ಮನೆ ಇತ್ತು. ಅದೀಗ 1 ಕೋಟಿ ರೂ. ಮೌಲ್ಯ ದಾಟಿದೆ.
ಇದೇ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಮೋದಿ ಕಾಂಗ್ರೆಸ್ ಅಭ್ಯರ್ಥಿ ಸಂಜೀವ ಭಟ್ ಅವರ ಪತ್ನಿ ಶ್ವೇತಾ ಭಟ್ ಅವರನ್ನು ಎದುರಿಸಬೇಕಾಗಿದೆ. 2007ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು 75,000 ಮತಗಳ ಭಾರೀ ಅಂತರದಿಂದ ಕ್ಷೇತ್ರದಲ್ಲಿ ಜಯಗಳಿಸಿದ್ದರು.












Click it and Unblock the Notifications