ಚಾಮರಾಜನಗರದಲ್ಲಿ ಹಲವೆಡೆ ಭೂಕಂಪನ, ಬೆದರಿದ ಜನ

ಕೊರೆಯುವ ಚಳಿಯಲ್ಲಿ ಗಾಢ ನಿದ್ರೆಯಲ್ಲಿ ಜನರು ಮುಳುಗಿದ್ದಾಗ ಮನೆಯಲ್ಲಿನ ಪಾತ್ರೆಪಗಡಗಳು ಉರುಳಲಾರಂಭಿಸಿದಾಗ ಜನ ಭೀತಿಯಿಂದ ಹೊರಗೋಡಿ ಬಂದಿದ್ದಾರೆ. ಆದರೆ, ಯಾವುದೇ ನಷ್ಟ ಸಂಭವಿಸಿದ ವರದಿ ಬಂದಿಲ್ಲ.
ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಮಾರ್ಟಳ್ಳಿ, ಪೊನ್ನಾಚಿ ಎಂಬ ಗ್ರಾಮಗಳಲ್ಲಿ ಕಂಪನವಾದ ಅನುಭವವಾಗಿದೆ. ಕಂಪನದ ಪ್ರಮಾಣ ಎಷ್ಟು ಎಂದು ಇನ್ನೂ ತಿಳಿದುಬಂದಿಲ್ಲ.
ಹವಾಮಾನ ಇಲಾಖೆಯ ಪ್ರಕಾರ, ಚಾಮರಾಜನಗರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಜಿಲ್ಲೆಯಲ್ಲಿ 13.8 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿಯೂ ಕನಿಷ್ಠ ತಾಪಮಾನ 15 ಡಿಗ್ರಿಗಿಳಿದಿದ್ದು, ಜನ ಗಡಗಡ ಅನ್ನುತ್ತಿದ್ದಾರೆ.
ಚಾಮರಾಜನಗರದಲ್ಲಿ ಮಾತ್ರವಲ್ಲ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಕಳೆದ ಸಂಜೆ 5 ಗಂಟೆ 45 ನಿಮಿಷ 15 ಸೆಕೆಂಡಿಗೆ 4.8 ಮ್ಯಾಗ್ನಿಟ್ಯೂಡ್ ಇರುವಂತಹ ಕಂಪನ ಸಂಭವಿಸಿದೆ. ತಜ್ಞರು ಹೇಳುವ ಪ್ರಕಾರ, ಇಂತಹ ಕಂಪನಗಳು ಯಾವುದೇ ಅನಾಹುತ ತರುವುದಿಲ್ಲ ಮತ್ತು ಇಂಥವು ಆಗಾಗ ಸಂಭವಿಸುತ್ತಲೇ ಇರುತ್ತವೆ.












Click it and Unblock the Notifications