ವಾಯುಸೇನೆ ಮಹಿಳಾ ಅಧಿಕಾರಿ ನಿಗೂಢ ಸಾವು

Woman IAF officer Anandita Das found dead
ಜೋಧ್ ಪುರ, ನ.28: ಭಾರತೀಯ ವಾಯುಸೇನೆಗೆ ಸೇರಿದ ಮಹಿಳಾ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬುಧವಾರ (ನ.28) ಬೆಳಗ್ಗೆ ಪತ್ತೆಯಾಗಿದೆ.

ಪಶ್ಚಿಮ ಬಂಗಾಳ ಮೂಲದ 29 ವರ್ಷದ ಸ್ಕ್ವಾಡ್ರಾನ್ ಲೀಡರ್ ಅನಂದಿತಾ ದಾಸ್ ಅವರು ತಮ್ಮ ನಿವಾಸದಲ್ಲಿ ಸೀಲಿಂಗ್ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದಾರೆ.

ಅನಂದಿತಾ ದಾಸ್ ಅವರ ಪತಿ ಕೂಡಾ ಭಾರತೀಯ ವಾಯುಸೇನೆ ಅಧಿಕಾರಿಯಾಗಿದ್ದು, ಇಬ್ಬರು ಜೋಧ್ ಪುರ ರಿಜೆಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಅನಂದಿತಾ ದಾಸ್ ಅವರ ಶವವನ್ನು ಮಹಾತ್ಮಾ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಎಸ್ ಡಿ ಗೋಸ್ವಾಮಿ ಹೇಳಿದ್ದಾರೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತಿದೆ. ಆದರೆ, ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ.

2006 ರಲ್ಲಿ ವಾಯುಸೇನೆ ಸೇರಿದ್ದ ಆನಂದಿತಾ ದಾಸ್ ಅವರು ಉತ್ತಮ ಅಧಿಕಾರಿ ಎಂಬ ಹೆಸರು ಗಳಿಸಿದ್ದರು. ಆನಂದಿತಾ ಅವರಿಗೆ ಸಾಯುವಂಥ ಯಾವುದೇ ತೊಂದರೆಗಳಿರಲಿಲ್ಲ. ಕುಟುಂಬದ ಸಮಸ್ಯೆ ಇರಲಿಲ್ಲ. ಅವರ ಪತಿ ಕೂಡಾ ಸೇನೆಯಲ್ಲಿದ್ದು, ಇಬ್ಬರು ಜೋಧ್ ಪುರದಲ್ಲೇ ನೆಲೆಸಿದ್ದರು. ಆತ್ಮಹತ್ಯೆ ಪತ್ರ ಯಾವುದು ಸಿಕ್ಕಿಲ್ಲ.

ವಾಯುಸೇನೆಯಿಂದ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ವಾಯುಸೇನೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ವಕ್ತಾರ ಗೋಸ್ವಾಮಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+