ಚಿನ್ನದ ಬೆಲೆ ಮತ್ತೊಮ್ಮೆ ದಿಢೀರ್ ಏರಿಕೆ

ದೀಪಾವಳಿ ಸೀಸನ್ ಮುಗಿಯುತ್ತಾ ಬಂದಿದೆ. ಮದುವೆ ಸೀಸನ್ ಕಾರಣ ಇದ್ದರೂ ಇರಬಹುದು. ಹೂಡಿಕೆದಾರರು ಮತ್ತೊಮ್ಮೆ ಚಿನ್ನದ ಮೇಲೆ ಕಣ್ಣು ಹಾಕಿರುವುದು, ರುಪಾಯಿ ಮೌಲ್ಯ ಕುಸಿತ ಪ್ರಮುಖ ಕಾರಣ ಎನ್ನಬಹುದು.
ಸೆ.14 ರಲ್ಲಿ 32,900 ರು ಮುಟ್ಟಿದ್ದ ಚಿನ್ನ ಬೆಲೆ ಮತ್ತೆ ಅದೇ ರೇಂಜ್ ನತ್ತ ಸಾಗಿದೆ. ಬೆಂಗಳೂರಿನಲ್ಲಿ ಶನಿವಾರ (ನ.24) ಚಿನ್ನ (spot) ದ ದರ 31,900.00 ರು (24K), 29,800.00 ರು(22K), ಬೆಳ್ಳಿ 1 ಕಿಲೋ 63,800 ರು ಇತ್ತು.
ದೆಹಲಿಯಲ್ಲಿ ಮಂಗಳವಾರ ( ನ.27) ಸ್ಪಾಟ್ ಗೋಲ್ಡ್ 99.9% ಪ್ರತಿ 10 ಗ್ರಾಂಗೆ 32,975 ಹಾಗೂ 99.5 % ಚಿನ್ನ ಪ್ರತಿ 10 ಗ್ರಾಂಗೆ 32,775 ರು ನಷ್ಟಿದೆ.
ಗ್ರೀಸ್ ಆರ್ಥಿಕ ಮುಗ್ಗಟ್ಟಿಗೆ ಬೇಲ್ ಔಟ್ ಸಿಗುವ ಬಗ್ಗೆ ಭರವಸೆ ಸುದ್ದಿಗಳು ಹರಡಿದ ಪರಿಣಾಮ ಚಿನ್ನದ ದರದಲ್ಲಿ ಏರುಪೇರು ಕಂಡು ಬಂದಿತ್ತು. ಪ್ರತಿ ಔನ್ಸ್ ಗೆ 1,749 ಡಾಲರ್ ನಷ್ಟಿತ್ತು.
ಬೆಂಗಳೂರಿನಲ್ಲಿ ಮಂಗಳವಾರ (ನ.27) ಚಿನ್ನ (spot) ದ ದರ 32,640.00 ರು (24K), 30,250.00 ರು(22K), ಬೆಳ್ಳಿ 1 ಕಿಲೋ 65,500 ರು ಇದೆ. ಉಳಿದಂತೆ ಚೆನ್ನೈನಲ್ಲಿ 22K(32,290), 24K(32,420) ಇದೆ.
ಅಹಮದಾಬಾದಿನಲ್ಲಿ 32725.00(22K), 32850.00(24K). ಮುಂಬೈ, ದೆಹಲಿ, ಜೈಪುರಗಳಲ್ಲಿ 32 ಸಾವಿರ ಗಡಿಯಲ್ಲೇ ಚಿನ್ನದ ದರ ಮುಂದುವರೆದಿದೆ.
ಯುರೋಪಿನಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಆಗುತ್ತಿದೆ. ಬಂಡವಾಳ ಹೂಡಿಕೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯೂ ಚಿನ್ನದ ಬೆಲೆಯ ಮೇಲೆ ಆಗುತ್ತಿದೆ. ಚಿನ್ನದ ದರ ಏರಿಕೆಯಿಂದ ಗ್ರಾಹಕರಿಗೆ ಕೊಂಚ ಹಿನ್ನೆಡೆ ಉಂಟಾಗಿದ್ದರೂ ಹೂಡಿಕೆದಾರರಿಗೆ ಸಂತಸ ಮೂಡಿಸಿದೆ.












Click it and Unblock the Notifications