ಪ್ರೀತಿ ಮಾಯೆಗೆ ಸಿಲುಕಿ ತಾಯಿಯನ್ನೇ ಕೊಂದ ಬಾಲೆ

Girl held for Killing mother Haryana
ಚಂದೀಗಢ, ನ.26: 'ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಝಾರೂ..' ಹೌದು ದುನಿಯಾ ಚಿತ್ರದ ಈ ಹಾಡಿನ ಸಾಲುಗಳಂತೆ ಪ್ರೀತಿಯ ಮಾಯೆಗೆ ಸಿಲುಕಿ, ತನ್ನ ಹೆತ್ತಮ್ಮನನ್ನೇ ಕೊಂದು ಪರಾರಿಯಾಗಿದ್ದ ಬಾಲೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಯೊಬ್ಬ ಹೆತ್ತವರಿಗೆ ತನ್ನ ಮಗಳನ್ನು ಒಳ್ಳೆ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಇರುವುದು ಸಹಜ. ಅದೇ ರೀತಿ ಶೀಲಾ ಅವರಿಗೂ ತನ್ನ 16 ವರ್ಷ ಮಗಳನ್ನು ಒಳ್ಳೆ ಮನೆಗೆ ಕೊಡುವ ಆಸೆಯಿತ್ತು.

ಆದರೆ, ನಡೆದಿದ್ದೇ ಬೇರೆ.. ಚಂದೀಗಢದ ನಿವಾಸಿ ಶೀಲಾ ಅವರ 16 ವರ್ಷದ ಮಗಳು ತನ್ನ ಬಡಾವಣೆಯಲ್ಲೇ ಇದ್ದ ಒಬ್ಬನನ್ನು ಪ್ರೀತಿಸತೊಡಗಿದಳು. ಯೋಗ್ಯ ವ್ಯಕ್ತಿಯಾಗಿದ್ದರೆ ಶೀಲಾ ಕೂಡಾ ಸುಮ್ಮನಿರುತ್ತಿದ್ದರು ಎನಿಸುತ್ತದೆ.

16 ವರ್ಷದ ಹುಡುಗಿ ಪ್ರೀತಿಸತೊಡಗಿದ್ದು, ತನಗಿಂತ ಎರಡು ಪಟ್ಟು ವಯಸ್ಸಿನಲ್ಲಿ ಹಿರಿಯನಾದ ಸುರೀಂಧರ್ ಎಂಬ ವ್ಯಕ್ತಿಯನ್ನು ಎಂಬುದು ತಿಳಿದಾಗ ಶೀಲಾ ಹೌಹಾರಿದ್ದಾರೆ.

ವಯಸ್ಸು ಹೆಚ್ಚು ಎಂಬುದನ್ನು ಬದಿಗೊಟ್ಟರೂ ಆತ ಇತರೆ ಜಾತಿಗೆ ಸೇರಿದವನು ಎಂಬುದು ತಿಳಿದ ಮೇಲೆ ಶೀಲಾ ತನ್ನ ಮಗಳಿಗೆ ಬುದ್ಧಿ ಹೇಳಿದ್ದರು.

ಆದರೆ, ಪ್ರೀತಿಯಲ್ಲಿ ಬಲುದೂರ ಸಾಗಿದ್ದ ಬಾಲೆ ತನ್ನ ತಾಯಿ ಮಾತು ಕೇಳಿಸಿಕೊಳ್ಳಲೇ ಇಲ್ಲ. ತನ್ನ ಗೆಳೆಯ ಸುರೀಂಧರ್, ರಿಂಕು ಎಂಬುವರ ಜೊತೆ ಸೇರಿ 40 ವರ್ಷದ ಶೀಲಾ ಅವರನ್ನು ಅಕ್ಟೋಬರ್ ಕೊನೆ ವಾರದಲ್ಲಿ ಕೊಲೆ ಮಾಡಿ, ಚರಂಡಿಗೆ ಎಸೆದಿದ್ದರು.

ಇತ್ತೀಚೆಗೆ ಬಂಧಿತಳಾದ ಹುಡುಗಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ. ತನ್ನ ತಾಯಿ ಶೀಲಾಳಿಗೆ ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿಕೊಟ್ಟೆ. ಅವಳಿಗೆ ಪ್ರಜ್ಞೆ ತಪ್ಪಿದ ಮೇಲೆ ಸುರೀಂಧರ್ ನನ್ನು ಕರೆದೆ.

ಸುರೀಂಧರ್ ಹಾಗೂ ಆತನ ಗೆಳೆಯ ರಿಂಕು ಇಬ್ಬರು ಕೊರಳು ಕೊಯ್ದು ಚರಂಡಿಗೆ ಎಸೆದರು. ನಾನು 10 ದಿನಗಳ ನಂತರ ಸುರೀಂಧರ್ ನನ್ನು ಮದುವೆಯಾದೆ. ಎಲ್ಲವೂ ಅಂದುಕೊಂಡಂತೆ ಆಯಿತು. ಪ್ರೀತಿಗೆ ನನ್ನ ತಾಯಿ ವಿರೋಧಿಸಿದ್ದು, ಸಿಟ್ಟು ತರಿಸಿತ್ತು ಅದಕ್ಕೆ ಕೊಲೆ ಮಾಡಿದೆ ಎಂದು ಹುಡುಗಿ ಹೇಳಿದ್ದಾಳೆ.

ಶೀಲಾ ಅವರ ಸೋದರನಿಗೆ ತನ್ನ ತಂಗಿ ಕೊಲೆ ಬಗ್ಗೆ ಶಂಕೆ ವ್ಯಕ್ತವಾದ ಕಾರಣ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸಿದ ಪೊಲೀಸರಿಗೆ ತನ್ನ ಹೆತ್ತಮ್ಮನನ್ನೇ ಕೊಂದ 16 ರ ಬಾಲೆಯ ಪ್ರೀತಿ ಕತೆ ಸಿಕ್ಕಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+