ಮಧುಸೂದನ್ ವಿರುದ್ಧ ಸಿಎ ಸೈಟ್ ನುಂಗಿದ ಆರೋಪ

ಆದರೆ, ಈ ಆರೋಪಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿದ ಶಾಸಕ ಗೋ. ಮಧುಸೂದನ್ ಅವರು, 'ಇದು ಮಧುಸೂದನ್ ಗೆ ಸೇರಿದ ಸೈಟ್ ಅಲ್ಲ. ಅಲ್ಲಿ ಸೈಟು ಖರೀದಿ ಮಾಡಲು ಸಾಧ್ಯವಿಲ್ಲ. ನಾನು ಯಾವುದೇ ಸಂಸ್ಥೆ ನಡೆಸುತ್ತಿಲ್ಲ. ನನ್ನ ಸಂಸ್ಥೆ ಸೈಟು ಖರೀದಿಸಿಲ್ಲ' ಎಂದಿದ್ದಾರೆ..
'ನಾನು ವಿದ್ಯಾಸಂಸ್ಥೆಯೊಂದರ ದುಃಸ್ಥಿತಿ ಕಂಡು ಅವರಿಗೆ ಸಿಎ ಸೈಟು ಮಂಜೂರು ಮಾಡುವಂತೆ ಅಂದಿನ ಸಿಎಂಗೆ ಶಿಫಾರಸು ಮಾಡಿದ್ದೆ. ಅದರಂತೆ, 30 ಗುತ್ತಿಗೆ ಕರಾರು ಒಪ್ಪಂದ ಮಾಡಿಕೊಂಡು ನೀಡಲಾಗಿದೆ.
ನಾನು ಮನೆ ಕಟ್ಟಲು ಬರುವುದಿಲ್ಲ. ನನ್ನ ಮಕ್ಕಳಿಗೆ ಪರಭಾರೆ ಮಾಡಲು ಬರುವುದಿಲ್ಲ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನು ವಿವರಿಸುತ್ತೇನೆ' ಎಂದರು.
ಆರೋಪವೇನು?: ವಿದ್ಯಾಸಂಸ್ಥೆಯೊಂದರ ಗೌರವಾಧ್ಯಕ್ಷರಾಗಿರುವ ಮಧುಸೂದನ್ ಅವರು 46 ಕೋಟಿ ಬೆಲೆಬಾಳುವ ನಿವೇಶನ ಜಾಗವನ್ನು ಕೇವಲ 7 ಲಕ್ಷಕ್ಕೆ ಖರೀಸಿದ್ದಾರೆ. ಮಧುಸೂದನ್ ಗೆ ಸಿಎ ಸೈಟು ಮಂಜೂರು ಮಾಡುವಲ್ಲಿ ಸಚಿವ ಸುರೇಶ್ ಕುಮಾರ್ ಸಹಾಯ ಮಾಡಿದ್ದಾರೆ.
3.5 ಎಕರೆ ಪ್ರದೇಶದಲ್ಲಿರುವ ಸೈಟು ಗಳು ಅಕ್ರಮವಾಗಿ ವಿದ್ಯಾಸಂಸ್ಥೆಯೊಂದರ ಪಾಲಾಗಿದೆ. ಸೀನಿಯಾರಿಟಿ ನಿಯಮ ಪಾಲಿಸದೆ ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಮಧುಸೂದನ್ ಅವರಿಗೆ ಸೈಟು ಮಂಜೂರು ಮಾಡಿದ್ದಾರೆ ಎಂದು ಪ್ರಜ್ಞಾವಂತ ನಾಗರೀಕ ವೇದಿಕೆ ಸಂಚಾಲಕ ಲಕ್ಷ್ಮಣ್ ಆರೋಪಿಸಿದ್ದಾರೆ.
500 ಸಿಎ ಸೈಟುಗಳಲ್ಲಿ 250 ಸಿಎ ಸೈಟು ಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕೈ ಸೇರಿ ಅಕ್ರಮ ಆಸ್ತಿಯಾಗಿ ಬೆಳೆಯುತ್ತಿದೆ. ಲೈಬ್ರರಿ, ಆಸ್ಪತ್ರೆ, ಪೊಲೀಸ್ ಠಾಣೆ, ಶಾಲೆ, ಪಶು ಆಸ್ಪತ್ರೆ ಕಟ್ಟಲು ಇರುವ ಜಾಗ ಶಾಸಕರಿಗೆ ತಲುಪಿದೆ.
4000 ರು ರಿಂದ 7000 ಪ್ರತಿ ಚ.ಅಡಿ ಬೆಲೆ ಬಾಳುವ ನಿವೇಶನಗಳ ಆರಂಭಿಕ ಶುಲ್ಕ ಒಂದೂವರೆ ಲಕ್ಷ ಶೂಲ್ಕ ಕೂಡಾ ಮಧುಸೂದನ್ ಅವರು ಕಟ್ಟಿಲ್ಲ ಎಂಬುದು ಆರ್ ಐಟಿ ಮೂಲಕ ತಿಳಿದು ಬಂದಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.












Click it and Unblock the Notifications