ರೇಪ್ ಯತ್ನ: ಆರೋಪಿ ನಾಲಿಗೆ ಕಚ್ಚಿಬಿಸಾಕಿದ ಬಾಲಕಿ

up-attempt-to-molest-teenager-bites-off-tongue-of-youth
ಇಟಾವಾ (ಉ.ಪ್ರ), ನ.19: ಇತ್ತೀಚೆಗಂತೂ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರವಾಗುವ ಸಂಗತಿಗಳೇ ಕೇಳಿಬರುತ್ತಿವೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು ದೂರದ ಮಾತೇ ಆಗಿರುತ್ತದೆ. ಆದರೆ ಇಲ್ಲೊಬ್ಬ ಹದಿಹರಯದ ಬಾಲಕಿ ತನ್ನ ಮೇಲೆ ಎರಡಗಿದ ಕಾಮಾಂಧನಿಗೆ ತಕ್ಕ ಶಿಕ್ಷೆ ನೀಡಿದ್ದಾಳೆ.

ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮೇಲೆ ತನ್ನ ಅಷ್ಟೂ ಆಕ್ರೋಶವನ್ನು ಅವಡುಗಟ್ಟಿ ಸಹಿಸಿಕೊಂಡ ಬಾಲಕಿಯೊಬ್ಬಳು ಆರೋಪಿಯ ನಾಲಿಗೆಯನ್ನು ಕಚ್ಚಿಬಿಸಾಕಿದ್ದಾಳೆ.

ಇಟಾವಾ ಜಿಲ್ಲೆಯ ಭರತಾನಾ ಭಾಗದಲ್ಲಿ ಶನಿವಾರ ಈ ಪ್ರಸಂಗ ನಡೆದಿದೆ. ಫುರ್ರಾ ಸಲೇಂಪುರ ಗ್ರಾಮದಲ್ಲಿ 17 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿದ್ದಾಗ ಧೂರ್ತ ಕೈಲಾಶ ಬಹೇಲಿಯಾ ಎಂಬ 25 ವರ್ಷದ ಯುವಕ ಒಳ ನುಸುಳಿದ್ದಾನೆ.

ಸ್ವಯಂ ರಕ್ಷಣೆಗೆ ಮುಂದಾದ ಬಾಲಕಿ ಅರೆಕ್ಷಣವೂ ತಡಮಾಡದೆ ಆರೋಪಿಯ ನಾಲಿಗೆಯನ್ನು ಕಚ್ಚಿ ಕಚ್ಚಿ ತುಂಡರಿಸಿದ್ದಾಳೆ. ಆರೋಪಿ ಕೈಲಾಶ ಬಹೇಲಿಯಾ ಬಂಧನಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+