ಈ ವರ್ಷ 63 ಸಾವಿರ ಬ್ಯಾಂಕ್ ಹುದ್ದೆಗಳು ಕಾದಿದೆ

ಪ್ರಸಕ್ತ ಆರ್ಥಿಕ ವರ್ಷ 2012-13ರಲ್ಲಿ ಸುಮಾರು 63,200ಕ್ಕೂ ಅಧಿಕ ಹೊಸ ನೇಮಕಾತಿ ನಡೆಸಲಾಗುತ್ತದೆ ಎಂದು ಚಿದಂಬರಂ ಭರವಸೆ ನೀಡಿದ್ದಾರೆ.
ಹೊಸ ಖಾಸಗಿ ಬ್ಯಾಂಕ್ ಗಳಿಗೆ ಅನುಮತಿ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ಹೊಸ ಬ್ಯಾಂಕ್ ಸ್ಥಾಪನೆ ನಿಯಮಗಳಲ್ಲಿ ಬದಲಾವಣೆ, ಹೊಸ ಹುದ್ದೆಗಳ ಸೃಷ್ಟಿ ಇವೇ ಮುಂತಾದ ವಿಷಯಗಳ ಮೇಲೆ ಕೇಂದ್ರ ಸರ್ಕಾರ ಬದಲಾವಣೆ ತರಲು ನಿರ್ಧರಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.
2009-10 ಆರ್ಥಿಕ ವರ್ಷದಲ್ಲಿ 58,900 ನೇಮಕಾತಿ, 2010-11ರಲ್ಲಿ 57,758 ನೇಮಕಾತಿ ಹಾಗೂ 2011-12 ರಲ್ಲಿ 55,632 ನೇಮಕಾತಿ ಮಾಡಿಕೊಳ್ಳಲಾಗಿತ್ತು. ಪ್ರಸಕ್ತ ವರ್ಷ ಈ ಸಂಖ್ಯೆ ಹೆಚ್ಚಾಗಲಿದೆ.
ಸೆಪ್ಟೆಂಬರ್ 30 ರ ಗಣತಿಯಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಒಟ್ಟಾರೆ ಖಾಲಿ ಹುದ್ದೆಗಳ (ಅಧಿಕಾರಿಗಳು, ಕ್ಲರ್ಕ್ ಹಾಗೂ ಸಹಾಯಕ ಸಿಬ್ಬಂದಿ ಸೇರಿ) ಸಂಖ್ಯೆ 84,489ರಷ್ಟಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕುಗಳು ಒಟ್ಟು 63,200 ನೇಮಕಾತಿ ಮಾಡುವ ಭರವಸೆ ನೀಡಿದೆ. ಮಾರ್ಚ್ 2012ರ ಕೊನೆಗೆ ಒಟ್ಟಾರೆ ಸಾರ್ವಜನಿಕ ವಲಯದ ಬ್ಯಾಂಕ್ (ರಾಷ್ಟ್ರೀಕೃತ ಬ್ಯಾಂಕ್, ಎಸ್ ಬಿಐ ಹಾಗೂ ಜೊತೆಗಿನ ಬ್ಯಾಂಕ್ ಗಳು) ಗಳ ಉದ್ಯೋಗಸ್ಥರ ಸಂಖ್ಯೆ 8,01,509 ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದರಲ್ಲೇ ಸುಮಾರು 1,200 ಅಧಿಕಾರಿಗಳು, 20,000 ಕ್ಲರ್ಕ್ ಗಳು ಈ ವರ್ಷ ನೇಮಕವಾಗಲಿದ್ದಾರೆ. ಸೆಪ್ಟೆಂಬರ್ ಕೊನೆಗೆ ಎಸ್ ಬಿಐ ಹಾಗೂ ಜೊತೆಗಿನ ಐದು ಬ್ಯಾಂಕ್ ಗಳ ಖಾಲಿ ಹುದ್ದೆಗಳ ಸಂಖ್ಯೆ 28,979 ನಷ್ಟಿತ್ತು.
ಸರ್ಕಾರಿ ಸ್ವಾಮ್ಯದ ಎಸ್ ಬಿಐ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ 7,452 ಜನ ಉದ್ಯೋಗಗಳನ್ನು ಸಂಸ್ಥೆ ಕಳೆದುಕೊಂಡಿದೆ.
ಆದರೆ, ಈ ಆರ್ಥಿಕ ವರ್ಷದಲ್ಲಿ 9,500 ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ. 2012-13ರಲ್ಲಿ 9,500ಕ್ಕೂ ಅಧಿಕ ಕ್ಲಕ್ ಹುದ್ದೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದ್ದಾರೆ.
ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ.












Click it and Unblock the Notifications