ಹರಿಯಾಣದಲ್ಲಿ ಮತ್ತೆ ಗ್ಯಾಂಗ್ ರೇಪ್: 5 ವಾರದಲ್ಲಿ 20

haryana-another-woman-gang-molested-by-two
ರೋಹ್ಟಕ್, ನ.15: ಹರಿಯಾಣದಲ್ಲಿ ಕಳೆದ ಐದು ವಾರಗಳಲ್ಲಿ 20 ಅತ್ಯಾಚಾರ ಪ್ರಕರಣಗಳು. ಇದು ನಿಜಕ್ಕೂ ದುರ್ದೈವವೇ ಸರಿ. ಈ ಬಾರಿ 30 ವರ್ಷದ ವಿವಾಹಿತ ಮಹಿಳೆಯ ಮೇಲೆ ಇಬ್ಬರು ಯುವಕರು ಮುಗಿಬಿದ್ದು, ಅತ್ಯಾಚಾರವೆಸಗಿದ್ದಾರೆ.

ಹರಿಯಾಣದ ರೋಹ್ಟಕ್ ನಲ್ಲಿ ಮೇಹಂ ಉಪ ವಿಭಾಗದಲ್ಲಿ ಲಖನ್ ಮಾಜ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 13ರ ರಾತ್ರಿ ಈ ಅಮಾನವೀಯ ಘಟನೆ ನಡೆದಿದ್ದರೂ ಮೊನ್ನೆ ಮಂಗಳವಾರವಷ್ಟೇ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಆರೋಪಿಗಳಿಬ್ಬರೂ ಬಾಧಿತ ಮಹಿಳೆಯ ಪತಿಯ ನಿಕಟ ಸಂಬಂಧಿಗಳು. ಮಹಿಳೆ ದೂರು ದಾಖಲಿಸುತ್ತಿದ್ದಂತೆ ಭಾರತೀಯ ದಂಡಸಂಹಿತೆ Section 376 ಅನುಸಾರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಆರೋಪಿಗಳಾದ ರಾಜ್ ಕುಮಾರ್ ಮತ್ತು ಸುಭಾಷ್ ಮಹಿಳೆಯನ್ನು ಬೈಕಿನಲ್ಲಿ ಗ್ರಾಮದ ಹೊರವಲಯದಲ್ಲಿರುವ ಹೊಲಕ್ಕೆ ಬಲವಂತವಾಗಿ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಕೆಲ ದಿನಗಳ ನಂತರ ಬಾಧಿತ ಮಹಿಳೆ ತನ್ನ ಬಂಧುಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಅವರು ಪೊಲೀಸರ ಮೊರೆ ಹೋಗಿದ್ದಾರೆ. ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಶರ್ಮಾ ಅವರು ಲಖನ್ ಮಾಜ್ರಾ ಗ್ರಾಮಕ್ಕೆ ಭೇಟಿ ನೀಡಿ, ಬಾಧಿತ ಮಹಿಳೆಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದಿದ್ದಾರೆ. ಅದಾಗುತ್ತಿದ್ದಂತೆ ಗ್ರಾಮದ ಸುತ್ತಮುತ್ತ ಶೋಧ ಕಾರ್ಯ ಕೈಗೊಂಡ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ನಾಳೆ ಶುಕ್ರವಾರ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಎಸ್ಪಿ ವಿವೇಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+