ಬೆಳ್ಳಿಲೋಕದಲ್ಲಿ ಮಿಂಚಲು ಚಿನ್ನದಂತಹ ಅವಕಾಶ!

Ponds Femina Miss India auditions in Bangalore
ಬೆಂಗಳೂರು, ನ. 15 : ಬಳುಕುವ ಬಳ್ಳಿಯಂತಹ ಸುಂದರಿಯರನ್ನು ಸೃಷ್ಟಿಸುವ ಫ್ಯಾಷನ್ ಲೋಕದ ಥಳಕಿನ ಆಕರ್ಷಣೆಯೇ ಅಂತಹುದು. ತಾನೂ ಒಂದಿಲ್ಲೊಂದು ದಿನ ಐಶ್ವರ್ಯ ರೈ ಬಚ್ಚನ್‌, ಸುಷ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ, ಲಾರಾ ದತ್ತಾಳಂತೆ ಫ್ಯಾಷನ್ ಲೋಕದಲ್ಲಿ ಮಾತ್ರವಲ್ಲ ಚಿತ್ರರಂಗದಲ್ಲಿ ಕೂಡ ಮಿಂಚಬೇಕು, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಬೇಕು ಎಂದು ಹದಿಹರೆಯದ ಯುವತಿಯರು ಕನಸು ಕಂಡಿರುತ್ತಾರೆ.

ಮಿಸ್ ಬೆಂಗಳೂರು, ಮಿಸ್ ಕರ್ನಾಟಕ, ಮಿಸ್ ಇಂಡಿಯಾ, ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಆಗಬೇಕೆಂದು ಸೌಂದರ್ಯಪ್ರಜ್ಞೆ ಇರುವ ಮನೆಯಲ್ಲಿ ಹಿರಿಯರಿಂದ ಉತ್ತೇಜನ ಪಡೆದಿರುವ ಯಾವ ಯುವತಿಗೆ ಇಷ್ಟ ಇರುವುದಿಲ್ಲ ಹೇಳಿ? ಇದೆಲ್ಲ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಆಗದಿದ್ದರೂ ಕನಿಷ್ಠಪಕ್ಷ ಕಾಲೇಜಿನಲ್ಲಿ ಸೌಂದರ್ಯ ರಾಣಿಯಾಗಿ ಹುಡುಗರ ಕಣ್ಣು ಕುಕ್ಕಬೇಕೆಂದು ಇಷ್ಟಪಟ್ಟಿರುತ್ತಾರೆ.

ಆ ಕನಸು ನನಸಾಗಿಸಿಕೊಳ್ಳಲು ಅದ್ಭುತವಾದ ಅವಕಾಶವೊಂದು ಕರ್ನಾಟಕದ ಸುಂದರ ಕನಸಿನ ಹುಡುಗಿಯರಿಗೆ ಕೂಡಿಬಂದಿದೆ. ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ಬೆಂಗಳೂರು 2013ರ ಆರಂಭಿಕ ಸ್ಕ್ರೀನಿಂಗ್ ಟೆಸ್ಟ್ ಬೆಂಗಳೂರಿನಲ್ಲಿ ನವೆಂಬರ್ 25ರಂದು ಬ್ರಿಗೇಡ್ ಗೇಟ್‌ವೇನಲ್ಲಿ ಇರುವ ಶೆರಾಟನ್ ಬೆಂಗಳೂರು ಹೋಟೆಲ್‌ನಲ್ಲಿ ನಡೆಯಲಿದೆ. ಇದೇ ಸ್ಥಳದಲ್ಲಿ ಡಿಸೆಂಬರ್ 2ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಫೆಮಿನಾ ಮಿಸ್ ಇಂಡಿಯಾದ ಬೆಳ್ಳಿ ಹಬ್ಬದ ಅಂಗವಾಗಿ ಈ ಬಾರಿ ಭಾರೀ ಪ್ರಮಾಣದಲ್ಲಿ ತಯಾರಿಗಳು ನಡೆಯುತ್ತಿವೆ. ಸ್ಪರ್ಧೆಗೆ ಸುಂದರಿಯರನ್ನು ಆಯ್ಕೆ ಮಾಡಲು ಐದು ವಲಯಗಳನ್ನು ಮಾಡಲಾಗಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಲಯಗಳಲ್ಲಿ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗುತ್ತಿದೆ. ದಕ್ಷಿಣ ವಲಯದಲ್ಲಿ ಬೆಂಗಳೂರು, ಚೆನ್ನೈ ಮತ್ತು ಹೈದಬಾದ್‌ನಲ್ಲಿ ಆಯ್ಕೆ ನಡೆಯಲಿವೆ. ಅಂತಿಮ ಸ್ಪರ್ಧೆ ಮುಂಬೈನಲ್ಲಿ ನಡೆಯಲಿದೆ.

ಫ್ಯಾಷನ್ ಲೋಕದಲ್ಲಿ ಮಿಂಚಿರುವ ಅನೇಕರು ಕನ್ನಡ, ಹಿಂದಿ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಲೋಕದ ಸಹವಾಸವೇ ಸಾಕು ಎಂದು ದೂರ ಸರಿದವರೂ ಇದ್ದಾರೆ. ಮುಂದೆ ಅವರ ಬದುಕನ್ನು ಯಾವುದೇ ದಿಕ್ಕಿಗೆ ಕೊಂಡೊಯ್ಯಲಿ ಸೌಂದರ್ಯ ಪ್ರಜ್ಞೆ ಇರುವ ಟೀನೇಜಿನ ಹುಡುಗಿಯನೇಕರು ಆರಂಭದಲ್ಲಿ ಇಂಥ ಥಳಕು ಬಳುಕಿನ ಲೋಕದ ಆಕರ್ಷಣೆಗೆ ಒಳಗಾಗುವವರೆ. ಸುಂದರವಾಗಿ ಕಾಣದಿರಲು ಯಾವ ಯುವತಿ ತಾನೆ ಇಷ್ಟಪಡುವುದಿಲ್ಲ ಹೇಳಿ?

ಯಾರು ಅರ್ಹರು? : 18ರಿಂದ 25 ವರ್ಷದೊಳಗಿನ, 5.6 ಅಡಿಗಿಂತ ಎತ್ತರವಿರುವ, ಭಾರತದಲ್ಲಿ ಜನಿಸಿರುವ, ಪಾಸ್ಪೋರ್ಟ್ ಇರುವಂಥ ಮತ್ತು ಇನ್ನೂ ಮದುವೆಯಾಗದಿರುವ ಯಾವುದೇ ಯುವತಿ ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮ ಹೆಸರು, ವಿಳಾಸ, ದೇಹದ ಸುತ್ತಳತೆ (ಎದೆ, ಸೊಂಟ ಮತ್ತು ಪೃಷ್ಠ), ಮತ್ತು ಮೂರು ಫೋಟೋಗಳನ್ನು ಲಗತ್ತಿಸಿ ಅರ್ಜಿ ಗುಜರಾಯಿಸಬಹುದು. ದೇಹದಾರ್ಢ್ಯತೆ ಮತ್ತು ಅವಿವಾಹಿತರಾಗಿರುವ ಬಗ್ಗೆ ತಜ್ಞರಿಂದ ಪಡೆದ ಸರ್ಟಿಫಿಕೇಟ್ ನೀಡಬೇಕು.

ಏನೇನು ತರಬೇಕು? : ಎಲ್ಲಕ್ಕಿಂತ ಹೆಚ್ಚಾಗಿ ಸ್ವಿಮ್ ಸೂಟ್, ಸೊಂಟವನ್ನು ಮುಚ್ಚಲು ವಸ್ತ್ರ, ಸ್ನಾನದ ಕೋಣೆಯಿಂದ ಗ್ರೀನ್ ರೂಂವರೆಗೆ ಹೋಗುವಾಗ ಮುಚ್ಚಿಕೊಳ್ಳಲು ಗೌನ್, ಮೈಗಂಟಿಕೊಳ್ಳುವ ಶಾರ್ಟ್ಸ್, ಜಿ-ಸ್ಟ್ರಿಂಗ್, ಪಟ್ಟಿಯಿಲ್ಲದ ಕಂಚುಕ, ವೈಟ್ ಸಿಂಗ್ಲೆಟ್ಸ್, ಸೆಕ್ಸಿ ಕಾಕ್ಟೇಲ್ ಡ್ರೆಸ್, ಸರಿಹೊಂದುವಂತಹ ಪಾದರಕ್ಷೆಗಳನ್ನು ತರಲು ಮರೆಯಬಾರದು ಎಂದು ಆಯೋಜಕರು ಸ್ಪರ್ಧಾಳುಗಳಿಗೆ ಹೇಳಿದ್ದಾರೆ. ಇಷ್ಟ ಇದ್ದವರು, ಮನೆಯಲ್ಲಿ ಹಿರಿಯರಿಂದ ಅನುಮತಿ ಪಡೆದವರು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+