10.11.12- ಇಂದಿನ ಈ ದಿನಾಂಕದ ವಿಶೇಷವೇನು!?

ಟ್ವಿಟ್ಟರ್/ಫೇಸ್ ಬುಕ್ ಲೋಕವಂತೂ ಇದರ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಇದರ ಬಗ್ಗೆಯೇ ಚರ್ಚೆ. ಈ ವಿಶೇಷ ದಿನಾಂಕವನ್ನು ಸ್ಪೆಷಲ್ ಆಗಿ ಆಚರಿಸುವುದರ ಬಗ್ಗೆಯೇ ಗುಸಗುಸು. ಎಸ್ಎಂಎಸ್ ಗಳಲ್ಲೂ 10.11.12 ಹರಿದಾಡುತ್ತಿದೆ.
ಏರು ಕ್ರಮದಲ್ಲಿರುವ ಈ ಸಂಖ್ಯೆಗಳು ಉನ್ನತಿಯನ್ನು ತರುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿದೆ. 10.11.12 ನೋಡಿಯೇ ಅಸಂಖ್ಯಾತ ಮಂದಿ ರೋಮಾಂಚಿತರಾಗಿದ್ದಾರೆ. 'ಇವತ್ತು ಶುಭ ದಿನ. ಇಂದು ಸತಿ-ಪತಿಯಾಗುವ ಎಲ್ಲ ಜೋಡಿಗಳಿಗೂ ಶುಭಕಾಮನೆಗಳು- ಎನ್ನುತ್ತಿದೆ ಟ್ವೀಟೊಂದು.
ಇನ್ನು 21ನೇ ಶತಮಾನದಲ್ಲಿ ಜನಿಸಿದ ನವ ಕುಡಿಗಳಿಗೆ ವಿಶೇಷ ಸಂಖ್ಯಾಶಾಸ್ತ್ರದ ದಿನಾಂಕಗಳು ಸಾಕಷ್ಟು ಸಿಕ್ಕಿವೆ: 01/02/03, 02/03/04, 03/04/05, 04/05/06, 05/06/07, 06/07/08, 07/08/09, 08/09/10, 09/10/11 ಮತ್ತು 10/11/12.
ಗಮನಾರ್ಹವೆಂದರೆ ಇದೇ 21ನೇ ಶತಮಾನದ ಕುಡಿಗಳು 11/12/13 ದಿನಾಂಕಕ್ಕೂ ಸಾಕ್ಷಿಯಾಗಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಇಡೀ ಜಗತ್ತು 21/12/12 ದಿನವನ್ನು ಸುರಕ್ಷಿತವಾಗಿ ದಾಟಬೇಕು ಅಷ್ಟೇ.
21/12/12 ಜಗತ್ತು ಸರ್ವನಾಶವಾಗುತ್ತೋ / ಹೀಗೇ ಸುರಕ್ಷಿತವಾಗಿರುತ್ತೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇಂದಿನ 10.11.12 ದಿನವನ್ನು Enjoooooy ಮಾಡಿ!












Click it and Unblock the Notifications