ಎಚ್‌ಎಸ್‌ಆರ್ ಲೇಔಟ್: ಮಹಡಿಯಿಂದ ಬಿದ್ದು ಮಗು ಸಾವು

ಈ ದಾರುಣ ಘಟನೆ ಎಚ್‌ಎಸ್‌ಆರ್ ಲೇಔಟ್ ಸಮೀಪದ ಹರಳೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಹರಳೂರು ಮುಖ್ಯರಸ್ತೆಯ ಎಸ್‌ಜೆಆರ್ ಪಾರ್ಕ್ ವಿಸ್ತಾ (SJR Park Vista) ಅಪಾರ್ಟ್‌ಮೆಂಟಿನಲ್ಲಿ ವಾಸವಿರುವ ನಿತಿನ್ ಎಂಬುವರ ಮಗು ನೋಡನ್ ಮೃತಪಟ್ಟಿದ್ದು, ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿತಿನ್ ಅವರು ರಾತ್ರಿ 10.15ರಲ್ಲಿ ಸುಮಾರಿಗೆ ಪತ್ನಿಯೊಂದಿಗೆ ಫ್ಲಾಟ್‌ನ ನಡುಮನೆಯಲ್ಲಿ ಎಂದಿನಂತೆ ಟಿವಿ ನೋಡುತ್ತಾ ಕುಳಿತಿದ್ದರು. ಈ ವೇಳೆ ಮಲಗುವ ಕೋಣೆಯಲ್ಲಿನ ಮಂಚದ ಮೇಲೆ ಆಟವಾಡುತ್ತಿದ್ದ ಮಗು ನೋಡನ್, ಪಕ್ಕದಲ್ಲೇ ಇದ್ದ ಕಿಟಕಿಯಿಂದ ನುಸುಳಿ ಕೆಳಗೆ ಬಿದ್ದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಮಗುವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಗು ಮೃತಪಟ್ಟಿದೆ.
ನಿತಿನ್ ಅವರ ಫ್ಲಾಟ್‌ನ ಕಿಟಕಿಗೆ ಸರಳುಗಳನ್ನು ಅಳವಡಿಸಿರಲಿಲ್ಲ. ಅಲ್ಲದೇ, ಘಟನೆ ನಡೆದ ಸಂದರ್ಭದಲ್ಲಿ ಕಿಟಕಿಯ ಗಾಜು ಸಹ ತೆರೆದಿತ್ತು. ಇದರಿಂದಾಗಿ ಮಗು ಕಿಟಕಿಯಿಂದ ನುಸುಳಿ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications