ನರೇಂದ್ರ ಮೋದಿ ಒಬ್ಬ ಕೋತಿ: ಕಾಂಗ್ರೆಸ್ ನಾಯಕ

gujarat-cong-ajay-modhwadiya-compares-modi-with-monkey
ಅಹಮದಾಬಾದ್, ನ.9: ಮೊನ್ನೆ ಅರಿವುಗೇಡಿ 'ಉನ್ನತ ಶಿಕ್ಷಣ' ಸಚಿವರು ಡಾ. ಬಿಎಸ್ ಯಡಿಯೂರಪ್ಪ ಅವರನ್ನು ಕತ್ತೆಗೆ ಹೋಲಿಸಿದ್ದರು. ಹೊಲಸು ರಾಜಕಾರಣ ಯಾರು ಯಾರನ್ನು ಇನ್ನೂ ಯಾವುದೆಕ್ಕೆಲ್ಲ ಹೋಲಿಸುತ್ತದೋ ಎಂದು ಮಹಾಜನತೆ ಬೇಸರ ಮಾಡಿಕೊಂಡಿರುವ ಸಂದರ್ಭದಲ್ಲಿ ಪುಣ್ಯಾತ್ಮನೊಬ್ಬ ಗುಜರಾತಿನ ಮುಖ್ಯಮಂತ್ರಿಯನ್ನು ಕೋತಿಗೆ ಹೋಲಿಸಿ, ಕೃತಾರ್ಥನಾದೆ ಎಂದಿದ್ದಾರೆ.

ಗುಜರಾತಿನ ಕಾಂಗ್ರೆಸ್ ಮುಖ್ಯಸ್ಥ ಅರ್ಜುನ್ ಮೋದ್ವಾಡಿಯಾ ನಾಡಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೋತಿ ಎಂದು ಜರಿದಿದ್ದಾರೆ. ಇದರ ವಿರುದ್ಧ ಕಿಡಿಕಾರಿರುವ ಬಿಜೆಪಿ, ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ರನ್ನು ಸಿಂಹಕ್ಕೆ ಹೋಲಿಸುವ ಭರದಲ್ಲಿ ಸನ್ಮಾನ್ಯ ಅರ್ಜುನ್ ಮೋದ್ವಾಡಿಯಾ ನರೇಂದ್ರ ಮೋದಿ ಅವರ ಹೆಸರನ್ನು ಹೇಳದೆ, ಪರೋಕ್ಷವಾಗಿ ಮೋದಿಯನ್ನು ವಾನರಕ್ಕೆ ಹೋಲಸಿದ್ದಾರೆ.

ಅಹಮದಾಬಾದಿನಲ್ಲಿ ಗುರುವಾರ ನಡೆದ ಚುನಾವಣೆ ರ‍್ಯಾಲಿಯಲ್ಲಿ ಅರ್ಜುನ್ ಮೋದ್ವಾಡಿಯಾ ಹೀಗೆ ಹೇಳಿದ್ದಾರೆ:
ಅವರು (ಮೋದಿ ಎಂದು ಅರ್ಥೈಸಿಕೊಳ್ಳಬಹುದು) ಮಂಗನಿದ್ದಂತೆ. ಮರದ ಮೇಲೆ ಕುಳಿತ ಅದು ಕೆಳಗಿಳಿಯದೆಯೇ ಕಾಡಿನ ರಾಜ ಸಿಂಹದ (ಪ್ರಧಾನಿ ಸಿಂಗ್ ) ವಿರುದ್ಧ ಸುಮ್ನೇ ಸುಮ್ನೇ ಕೆಣಕುತ್ತಾ ಗುರ್ ಗುಟ್ಟುತ್ತದೆ. ಸಿಂಹ ಮರ ಏರುವುದಿಲ್ಲ. ಆದರೆ ಮಂಗ ಒಮ್ಮೆಯದರೂ ಕೆಳಕ್ಕಿಳಿಯಲೇ ಬೇಕು, ಅಲ್ವಾ' ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ವ್ಯಂಗ್ಯವಾಡಿದ್ದಾರೆ.

ಮೋದಿಗೆ ನೋಬೆಲ್ ಪ್ರಶಸ್ತಿ: ಅಷ್ಟೇ ಅಲ್ಲ. ಸುಳ್ಳು ಹೇಳುವುವರಿಗಾಗಿ ನೋಬೆಲ್ ಪ್ರಶಸ್ತಿ ಸ್ಥಾಪಿಸಬೇಕು. ಮತ್ತು ಅದನ್ನು ಈ ನರೇಂದ್ರ ಮೋದಿಗೇ ಮೊದಲು ನೀಡಬೇಕು ಎಂದೂ ಕಟಕಿಯಾಡಿದ್ದಾರೆ. ಗುಜರಾತ್, ವಿಧಾನಸಭೆ ಚುನಾವಣೆ ಡಿಸೆಂಬರ್ 13ರಿಂದ ಪ್ರಾರಂಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+