Get Updates
Get notified of breaking news, exclusive insights, and must-see stories!

ನನ್ ಮಕ್ಕಳ ಜೊತೆ ಲವ್ ಮಾಡಾಕ್ ಗಟ್ಸ್ ಬೇಕ್ : ಬರಾಕ್

Do you have guts to date Obama daughters
ನ್ಯೂಯಾರ್ಕ್, ನ. 8 : ಒಬ್ಬಳು ಮಲಿಯಾ ಆನ್ (14), ಹುಟ್ಟಿದ್ದು ಜುಲೈ 4, 1998ರಂದು. ಮತ್ತೊಬ್ಬಳು ನಟಾಶಾ (ಪ್ರೀತಿಯಿಂದ ಸಶಾ (11) ಎಂದು ಕರೆಯುತ್ತಾರೆ), ಹುಟ್ಟಿದ್ದು ಜೂನ್ 10, 2001. ಅಮೆರಿಕಾದ ಮೊದಲ ಕುಟುಂಬದ ಕುಡಿಗಳು ಇವರಿಬ್ಬರು. ಅರ್ಥಾತ್ ಅಮೆರಿಕಾದ ಮೊದಲ ಪ್ರಜೆ, 44ನೇ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ಮತ್ತು ಮಿಷೆಲ್ ಒಬಾಮಾ ಅವರ ಮುದ್ದಿನ ಮಕ್ಕಳು.

ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿರುವ ಇವರ ಮೇಲೆ ಬರಾಕ್ ಒಬಾಮಾ ಅವರಿಗೆ ಇನ್ನಿಲ್ಲದ ಮಮತೆ. ವಾಷಿಂಗ್ಟನ್‌ನಲ್ಲಿರುವ ಸಿಡ್ವೆಲ್ ಫ್ರೆಂಡ್ಸ್ ಸ್ಕೂಲಿನಲ್ಲಿ ಖಾಸಗಿಯಾಗಿ ಅಧ್ಯಯನ ನಡೆಸುತ್ತಿರುವ ಇಬ್ಬರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾರೆ ಮಿಷೆಲ್. ಒಬಾಮಾ ಮತ್ತೊಮ್ಮೆ ಅಧ್ಯಕ್ಷರಾದ ಮೇಲೆ ಇಡೀ ಜಗತ್ತಿನ ಕಣ್ಣು ಈಗ ಈ ಎರಡು ಮಕ್ಕಳ ಮೇಲೆ ಬಿದ್ದಿದೆಯೆಂದರೆ ತಪ್ಪಾಗಲಾರದು.

ಮಲಿಯಾ ಆಗಲೆ ಟೀನೇಜರ್ ಆಗಿದ್ದರೆ, ಸಶಾ ಟೀನೇಜಿಗೆ ಕಾಲಿಡಲು ಇನ್ನೆರಡೇ ವರ್ಷ. ಇಬ್ಬರೂ ಎಲ್ಲರನ್ನೂ ಗೌರವಿಸುವ, ಉತ್ತಮ ಗುಣಗಳಿರುವ 'ವಂಡರ್ಫುಲ್ ಯಂಗ್' ಲೇಡೀಸ್ ಎಂದು ಒಬಾಮಾ ಅವರೇ, ತಾವು ಅಧ್ಯಕ್ಷರಾದ ಮೇಲೆ ಮಾಡಿದ ಭಾಷಣದಲ್ಲಿ ಬಣ್ಣಿಸಿದ್ದಾರೆ. ತಮ್ಮ ಮಕ್ಕಳ ಬಗ್ಗೆ ಮಾತನಾಡುತ್ತ, ಒಬಾಮಾ ಅವರು ಯುವಕರಿಗೆ ಒಂದು ಸವಾಲನ್ನೂ ಎಸೆದಿದ್ದಾರೆ.

"ಮಕ್ಕಳೊಂದಿಗೆ ಡೇಟಿಂಗ್ ಮಾಡುವ ಯುವಕರಿಗೆ ಸಿಕ್ರೆಟ್ ಸರ್ವೀಸನ್ನು ದಾಟಿ ಬರುವ ಗಟ್ಸ್ ಇರಬೇಕು. ಅಂತಹ ಗಂಡು ಯಾರಾದರೂ ಇದ್ದರೆ, ಅವರು ಮಕ್ಕಳೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಅವರು ಏನು ಹೇಳುತ್ತಾರೋ ಅದನ್ನು ಅತ್ಯಂತ ಶಾಂತರೀತಿಯಿಂದ ಕೇಳುತ್ತೇನೆ" ಎಂದು ಹಾಸ್ಯಧಾಟಿಯಲ್ಲಿ ಬರಾಕ್ ಹೇಳಿದ್ದಾರೆ. ಅಂತಹ 'ಅಂಜದ ಗಂಡು' ಜಗತ್ತಿನಲ್ಲಿ ಯಾರಾದರೂ ಇದ್ದಾರಾ?

ಸೋತ ಮಿಟ್ ರೋಮ್ನಿಯ ಮಗನಂತೆ ಬರಾಕ್ ಒಬಾಮಾನ ಮಕ್ಕಳಿಬ್ಬರೂ ತಂದೆ ಹೋದಲ್ಲೆಲ್ಲ ಅವರ ಹಿಂದೆ ಹೋಗುವುದಿಲ್ಲ. ಮಹಾ ಸ್ಟೂಡಿಯಸ್, ಕುಡುಮಿಗಳು ಅಂತಲೂ ಕರಿಯಬಹುದು. ಆದರೆ, ಅವರು ಎಲ್ಲೆಲ್ಲಿ ಹೋಗಬೇಕೆಂದು ಬಯಸುತ್ತಾರೋ, ಅಲ್ಲೆಲ್ಲ ಹೋಗಲು ಬರಾಕ್ ಅನುಮತಿ ನೀಡಿದ್ದಾರೆ. ಆದರೆ, ಡೇಟಿಂಗ್ ಮಾಡಬೇಕಿದ್ದರೆ ಮೊದಲು ಅಪ್ಪಅಮ್ಮಂದಿರೊಡನೆ ಮಾತನಾಡಿ, ನಂತರ ಅಮ್ಮನ ಅನುಮತಿ ಪಡೆದು ಏನು ಬೇಕಾದರೂ ಮಾಡಿ ಎಂದು ಹೇಳಿದ್ದಾರೆ.

ಇವರಿಬ್ಬರಲ್ಲಿ ಚಿಕ್ಕವಳಾದ ಸಶಾಗೆ ಡೇಟಿಂಗ್‌ನಲ್ಲಿ ಅಂತಹ ಆಸಕ್ತಿಯಿಲ್ಲ. ದೊಡ್ಡವಳು ಮಲಿಯಾ ಹೈಸ್ಕೂಲ್ ಓದುತ್ತಿದ್ದು, ಆಕೆಗೆ ನಾಯಿಗಳನ್ನು ಕಂಡರೆ ಬಲು ಅಲರ್ಜಿ. ಮಲಿಯಾಗೆ ಸ್ನೇಹಿತರನ್ನು ಮಾಡಿಕೊಳ್ಳಲು ಅಂತಹ ಆಸಕ್ತಿಯೂ ಇದ್ದಂತಿಲ್ಲ. ಆಕೆ ಫೇಸ್ ಬುಕ್ ತಾಣದಲ್ಲಿ ಭದ್ರತೆಯ ದೃಷ್ಟಿಯಿಂದ ಇನ್ನೂ ಇಣುಕಿಹಾಕಿಲ್ಲ. ಇಂತಿರುವ ಮಕ್ಕಳ ಜೊತೆ ಡೇಟಿಂಗ್ ಮಾಡಲು ಯಾರಿಗಾದರೂ ಆಸಕ್ತಿ ಇದೆಯಾ? [ಒಬಾಮಾ ವಿಜಯೋತ್ಸವದ 8 ಚಿತ್ರಗಳು]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+