ಪವರ್ ಚೇರ್ಮನ್ ಕುರ್ಚಿ ಬಿಟ್ಟ ರತನ್ ಟಾಟಾ
ಮುಂಬೈ,
ನ.8: ರತನ್ ಟಾಟಾ ಅವರು ಟಾಟಾ ಪವರ್ ಸಂಸ್ಥೆ ಚೇರ್ಮನ್ ಸ್ಥಾನದಿಂದ್ ಕೆಳಗಿಳಿದಿದ್ದಾರೆ. ಸಿರಿಸ್ ಪಿ ಮಿಸ್ತ್ರಿ ಅವರು ಹೊಸ ಚೇರ್ಮನ್ ಆಗಿ ಅಧಿಕಾರ ಗುರುವಾರ(ನ.8) ಸ್ವೀಕರಿಸಿದ್ದಾರೆ. id="toptextpromo">ಆದರೆ,
ಖಾಸಗಿ ವಲಯದ ಅತಿದೊಡ್ಡ ವಿದ್ಯುತ್ ಸಂಸ್ಥೆ ಟಾಟಾ ಪವರ್ ನ ಬೋರ್ಡ್ ನಲ್ಲಿ ರತನ್ ಟಾಟಾ ಮುಂದುವರೆಯಲಿದ್ದಾರೆ. ಡಿಸೆಂಬರ್ 2012ರಲ್ಲಿ ನಿವೃತ್ತಿ ಹೊಂದುವ ತನಕ ಟಾಟಾ ಪವರ್ ಬೋರ್ಡ್ ನಲ್ಲಿ ಸಕ್ರಿಯರಾಗಿರುತ್ತಾರೆ ಎಂದು ಟಾಟಾ ಪವರ್ ಸಂಸ್ಥೆ ಹೇಳಿದೆ. id='are-slot-1' class='oiad oi-axt oiadv'> id='top-searched-articles'>1989
ರಿಂದ ರತನ್ ಟಾಟಾ ಟಾಟಾ ಪವರ್ ಸಂಸ್ಥೆ ಬೋರ್ಡ್ ಸದಸ್ಯರಾಗಿದ್ದಾರೆ. ಮಿಸ್ತ್ರಿ ಅವರನ್ನು ಡಿಸೆಂಬರ್ 23,2011ರಲ್ಲಿ ಬೋರ್ಡ್ ಗೆ ಸೇರಿಸಿಕೊಳ್ಳಲಾಗಿತ್ತು.ಒಟ್ಟಾರೆ 1996 ರಿಂದ 2006ರ ತನಕ ಟಾಟಾ ಸಂಸ್ಥೆಯ ಇತರೆ ಬೋರ್ಡ್ ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿರುವ ಮಿಸ್ತ್ರಿ ಈಗ ದೇಶದ ಅತಿ ದೊಡ್ಡ ಖಾಸಗಿ ವಿದ್ಯುತ್ ಉತ್ಪಾದನಾ ಸಂಸ್ಥೆ ಚುಕ್ಕಾಣಿ ಹಿಡಿಯಲಿದ್ದಾರೆ. ಟಾಟಾ ಪವರ್ ಸಂಸ್ಥೆ ಸುಮಾರು 6,899 ಮೆ,ವ್ಯಾ ಉತ್ಪಾದನೆ ಸಾಮರ್ಥ್ಯ ಹೊಂದಿದೆ.












Click it and Unblock the Notifications