ಕಾಲೇಜು ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ

ನಗರದ ಚಂಡೀಗಢ್ ಗ್ರೂಪ್ ಆಫ್ ಕಾಲೇಜುಗಳ ಕಂಪ್ಯೂಟರ್ ವಿಜ್ಞಾನದ ಮೊದಲ ವರ್ಷದ ವಿದ್ಯಾರ್ಥಿನಿ ಅತ್ಯಾಚಾರಕ್ಕೀಡಾದ 19 ವರ್ಷದ ಬಾಲಕಿ. 'ಪರಿವರ್ತನ' ಎಂಬ ಹೆಸರಿನಲ್ಲಿ ಕಳೆದ ಶನಿವಾರ ಕಾಲೇಜು ವಾರ್ಷಿಕೋತ್ಸವ ನಡೆದಿತ್ತು.
ಕಾರ್ಯಕ್ರಮದ ಅಂಗವಾಗಿ ಬಿಗಿ ಭದ್ರತೆಯಿದ್ದು, ಜನಜಂಗುಳಿ ಇದ್ದಾಗ್ಯೂ ಈ ಹೇಯ ಕೃತ್ಯ ನಡೆದಿದೆ. ಶನಿವಾರ ರಾತ್ರಿ 8.30ರಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ಮುಚ್ಚಿಹಾಕಲು ಕಾಲೇಜು ಆಡಳಿತ ಮಂಡಳಿ ಯತ್ನಿಸಿತಾದರೂ ಇತರೆ ವಿದ್ಯಾರ್ಥಿಗಳಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಘಟನೆಯ ಬಗ್ಗೆ ಸೋಮವಾರ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದೆ.
ಕಾಲೇಜು ಆವರಣದಲ್ಲಿ ಬಿಗಿ ವಾತಾವರಣ ನೆಲೆಸಿದ್ದು, ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮಧ್ಯೆ ಅತ್ಯಾಚಾರ ಪ್ರಕರಣದ ಸಂಬಂಧ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಚಿನ್, ಗುರಮಿತ್ ಸಿಂಗ್ ಮತ್ತು ಅಕ್ಷಯ್ ಬನ್ಸಾಲ್ ಎಂದು ಗುರುತಿಸಲಾಗಿದೆ. ಇವರೆಲ್ಲ ಎಂಬಿಎ ವಿದ್ಯಾರ್ಥಿಗಳು.
'ಪೊಲೀಸರು CCTV ವಿಡಿಯೋ ಮೂಲಕ ಆರೋಪಿಗಳನ್ನು ಗುರುತಿಸಲಾಗಿದ್ದು, ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ. ಕಾಲೇಜಿನ ಹೊರಗಿನವರೂ ಇವರಿಗೆ ಕುಮ್ಮಕ್ಕು ನೀಡಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ' ಎಂದು ನಗರ ಪೊಲೀಸ್ ಎಸ್ಪಿ ಸ್ವರ್ಣದೀಪ್ ಸಿಂಗ್ ಹೇಳಿದ್ದಾರೆ.












Click it and Unblock the Notifications