Q2: ಭಾರ್ತಿ ಲಾಭ ಕುಸಿತ, ಆದಾಯ ಏರಿಕೆ

Bharti Aitel
ಬೆಂಗಳೂರು, ನ.7: ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಸಂಸ್ಥೆ Q2ನಲ್ಲಿ ನಿವ್ವಳ ಲಾಭ ಕುಸಿದರೂ ನಿರೀಕ್ಷಿತ ಆದಾಯ ಗಳಿಸಿದೆ.

ತ್ರೈಮಾಸಿಕದಲ್ಲಿ ಅದಾಯ ಗಳಿಕೆ ಹಾಗೂ EBITDA ಮಾರ್ಜಿನ್ ನಲ್ಲಿ ಭಾರ್ತಿ ಏರ್ ಟೆಲ್ ನಿರೀಕ್ಷಿತ ಮಟ್ಟ ಮುಟ್ಟಿದೆ.

ಬುಧವಾರ (ನ.7) ಷೇರುಪೇಟೆಯಲ್ಲಿ ಬೆಳಗ್ಗೆ 9.40ರ ಸುಮಾರಿಗೆ ಭಾರ್ತಿ ಏರ್ ಟೆಲ್ ಷೇರುಗಳು ಶೇ 1 ರಷ್ಟು ಏರಿಕೆ ಕಂಡಿತ್ತು.

ಆದರೆ, ಮಾರುಕಟ್ಟೆ ಅಂತ್ಯವಾಗುತ್ತಿದ್ದಂತೆ ಕೊಂಚ ಇಳಿಕೆ ಕಂಡಿದೆ. ಬಿಎಸ್ ಇನಲ್ಲಿ 271.10 ರು ನಂತೆ ಶೇ 0.88 ರಷ್ಟು ಇಳಿಕೆಯಾಗಿದೆ. ಎನ್ ಎಸ್ ಇನಲ್ಲಿ 271.10 ರು ನಂತೆ ಶೇ 0.97 ರಷ್ಟು ಕುಸಿದಿತ್ತು.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ 5.4 ರಷ್ಟು ಇಳಿಕೆ ಕಂಡು 721.2 ಕೋಟಿ ರು ಗಳಿಸಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಹೆಚ್ಚುವರಿ ತೆರಿಗೆ ಹೊರೆಯಿಂದ ಅಧಿಕ ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ನಿವ್ವಳ ಆದಾಯ ಶೇ 4.8 ರಷ್ಟು ಏರಿಕೆ ಕಂಡು 19,350.1 ಕೋಟಿ ರು ನಿಂದ 20,273.2 ಕೋಟಿ ರು ಗೆ ಏರಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ 831 ಕೋಟಿ ರು ನಿವ್ವಳ ಲಾಭ ಹಾಗೂ 19,512 ಕೋಟಿ ರು ಆದಾಯ ನಿರೀಕ್ಷೆಯಿತ್ತು.

Earnings before interest, tax, depreciation and amortisation (EBITDA) ಅಂತರ 108 ಮೂಲಾಧರ ಅಂಕಗಳಷ್ಟು ಸುಧಾರಣೆಗೊಂಡಿದೆ. ಶೇ 30.31 ರಷ್ಟು ನಿರೀಕ್ಷೆ ಮೀರಿ ಶೇ 31.3 ರಷ್ಟು ಅಂಶಕ್ಕೆ ಏರಿದೆ.

ಈ ತ್ರೈಮಾಸಿಕದಲ್ಲಿ ಆರ್ಥಿಕ ಖರ್ಚು ವೆಚ್ಚ, ಹಣಕಾಸು ವಿನಿಮಯ ಏರಿಳಿತದ ವೆಚ್ಚ 1,022 ಕೋಟಿ ರು ನಷ್ಟಿತ್ತು.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಭಾರತ ಮತ್ತು ದಕ್ಷಿಣ ಏಷ್ಯಾಗಳಲ್ಲಿ ಕಂಪನಿ ಆದಾಯ ಶೇ 4 ರಷ್ಟು ನಿರೀಕ್ಷಿತ ಆದಾಯ ಗಳಿಕೆ ಬಂದಿದ್ದು, 11,117 ಕೋಟಿ ರು ಗಳಿಸಿದೆ. ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ 10,525 ಕೋಟಿ ರು. ನಷ್ಟಿತ್ತು.

ಆಫ್ರಿಕಾ ವಿಭಾಗದಲ್ಲಿ ಆದಾಯ 6,051 ಕೋಟಿ ಬಂದಿದ್ದು ಇದು ಕೂಡಾ ನಿರೀಕ್ಷೆ ಮಟ್ಟ ಮೀರಿದೆ 6,000 ಕೋಟಿ ರು ನಷ್ಟಿತ್ತು. ಕಳೆದ ತ್ರೈಮಾಸಿಕದಲ್ಲಿ ಅಫ್ರಿಕಾದಿಂದ ಸುಮಾರು 5,758.6 ಕೋಟಿ ರು ಆದಾಯ ಮಾತ್ರ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+