ಚೆನ್ನೈ: ಮತ್ತೊಬ್ಬ ಮಹಿಳಾ ಟೆಕ್ಕಿ ಆತ್ಮಹತ್ಯೆ

ಇಲ್ಲಿನ ಕಾಂಗ್ನಿಜೆಂಟ್ ಟೆಕ್ನಾಲಜೀಸ್ ಸಲ್ಯೂಷನ್ಸ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಮಹಿಳಾ ಉದ್ಯೋಗಿ ಸಾವಿಗೆ ಶರಣಾಗಿದ್ದಾರೆ. ಆದರೆ, ಆಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಚೆನ್ನೈ ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಲಭ್ಯ ಮಾಹಿತಿ ಪ್ರಕಾರ, ತಡ ರಾತ್ರಿ ಕಚೇರಿಗೆ ಬಂದ ಉದ್ಯೋಗಿ ಕೆಲ ಹೊತ್ತಿನಲ್ಲೇ ಕಟ್ಟಡದ ಮೇಲಂತಸ್ತಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂದಿದ್ದಾರೆ. ರಜೆ ಬೇಕಾಗಿತ್ತು ಆನ್ ಲೈನ್ ರಜೆ ಅಪ್ಲೈ ಮಾಡಲು ಬಂದಿದ್ದೀನಿ ಎಂದು ಸೆಕ್ಯುರಿಟಿ ಬಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ಮಹಿಳೆಗೆ 2011ರಲ್ಲಿ ಮದುವೆಯಾಗಿದೆ. ಆಕೆ ಅಣ್ಣನ ಮನೆ ಚೆನ್ನೈ ಹೊರ ವಲಯದಲ್ಲಿದೆ. ಆಕೆ ಪತಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೈದರಾಬಾದಿನ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ನೀಲಿಮಾ ಆತ್ಮಹತ್ಯೆಯ ನಿಗೂಢತೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗುವ ಮುನ್ನವೇ ಮತ್ತೊಬ್ಬ ಇನ್ಫೋಸಿಸ್ ಟೆಕ್ಕಿ ಸಾವನ್ನಪಿರುವ ಘಟನೆ ನಡೆದಿತ್ತು.
ಜು.31 ರಂದು 27 ವರ್ಷದ ಇನ್ಫೋಸಿಸ್ ಉದ್ಯೋಗಿ ನಿಲೀಮಾ ಕಚೇರಿ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. 2011ರಲ್ಲಿ ಅಮೆರಿಕಕ್ಕೆ ತೆರಳಿದ್ದ ನಿಲೀಮಾ ಭಾರತಕ್ಕೆ ಜು.21, 2012ರಂದು ವಾಪಾಸ್ ಆಗಿದ್ದರು.
ನಂತರ ಕೆಲ ದಿನಗಳಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಲೀಮಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಎಂದು ನಿಲೀಮಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ನಂತರ 30 ವರ್ಷ ವಯಸ್ಸಿನ ಟೆಕ್ಕಿ ಗುಂಟೂರು ಮೂಲದ ಅನಿಲ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಸಾಫ್ಟ್ ವೇರ್ ಕ್ಷೇತ್ರದ ಉದ್ಯೋಗಿಗಳಿಗೆ ಆತಂಕ ಮೂಡಿತ್ತು.












Click it and Unblock the Notifications