ನಿಮ್ಹಾನ್ಸ್ ಆಸ್ಪತ್ರೆಗೆ ಸದ್ಯದಲ್ಲೇ ಬರಲಿದೆ ಹೆಲಿಪ್ಯಾಡ್

Bangalore Nimhans to get helipad air ambulance service shortly
ಬೆಂಗಳೂರು, ಅ.5: ರಾಜಧಾನಿಯ ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಹಾಕಿಕೊಂಡರೆ ರೋಗಿಯ ಸ್ಥಿತಿ ಹರೋಹರ ಎಂಬುದು ಬೆಂಗಳೂರಿಗೆ ಅಂಟಿಕೊಂಡಿರುವ ತೆಗಳಿಕೆ. ಪರಿಸ್ಥಿತಿ ಹೀಗಿರುವಾಗ ಗೋಲ್ಡನ್ ಅವರ್ ನಲ್ಲಿ ರೋಗಿ/ಗಾಯಾಳುಗಳನ್ನು ಬಚಾವು ಮಾಡಲು ಹೆಲಿಕಾಪ್ಟರ್ ಸೇವೆ ಇದ್ದರೆ ಹೇಗೆ? ಅನಿಸುವುದು ಸಹಜ. ಹಾಗೆಂದೇ ನಗರದ ಜಗದ್ವಿಖ್ಯಾತ ನಿಮ್ಹಾನ್ಸ್ ಆಸ್ಪತ್ರೆ ಸದ್ಯದಲ್ಲೇ ಹೆಲಿಕಾಪ್ಟರ್ ಸೇವೆ ಒದಗಿಸಲು ನಿರ್ಧರಿಸಿದೆ.

2-3 ತಿಂಗಳಲ್ಲಿ ಈ ಹೆಲಿಕಾಪ್ಟರ್ ಸೇವೆ ಲಭ್ಯವಾಗಲಿದೆ. ಆದರೆ ರೋಗಿ/ಗಾಯಾಳುವೇ ಅದರ ವೆಚ್ಚವನ್ನು ಭರಿಸಬೇಕಾಗಿರುವುದರಿಂದ ಸಾಮಾನ್ಯ ರೋಗಿಗಳಿಗೆ ಇದು ಅಕ್ಷರಶಃ ಗಗನಕುಸುಮವೇ ಸರಿ. ಆದರೆ air ambulance ಸೇವೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಇಲ್ಲ ಎಂಬುದು ಗಮನಾರ್ಹ.

ಈ air ambulance ಸೇವೆಯೊದಗಿಸಲು ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಯ ಆವರಣದಲ್ಲಿ ಅದೂ ತುರ್ತು ಚಿಕಿತ್ಸಾ ಘಟಕದ ಸನಿಹದಲ್ಲೇ ಒಂದು ಪುಟ್ಟ ಹೆಲಿಪ್ಯಾಡ್ ನಿರ್ಮಾಣವಾಗಲಿದೆ ಎಂದು ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಪಿ. ಸತೀಶಶ್ಚಂದ್ರ ಅವರು ತಿಳಿಸಿದ್ದಾರೆ.

ಅಂದಹಾಗೆ ಸರಕಾರಿ ಆಸ್ಪತ್ರೆಗಳ ಪೈಕಿ air ambulance ಸೇವೆ ಹೊಂದಿರುವ ಮೊದಲ ಆಸ್ಪತ್ರೆ ನಿಮ್ಹಾನ್ಸ್ ಆಗಲಿದೆ. ಕೇಂದ್ರ ಸರಕಾರ ಈ ಯೋಜನೆಗೆ ಹಣಕಾಸು ನೆರವು ಒದಗಿಸಲಿದೆ. ಇನ್ಫೋಸಿಸ್ ಧರ್ಮಶಾಲೆಯ ಪಕ್ಕದಲ್ಲಿ ಈ ಹೆಲಿಪ್ಯಾಡ್ ತಲೆಯೆತ್ತಲಿದೆ.

ಮೈಸೂರು, ಬಳ್ಳಾರಿ ಮತ್ತು ದಾವಣಗೆರೆಯಂತಹ ದೂರದ ಜಿಲ್ಲೆಗಳಿಂದಲೂ ರೋಗಿ/ಗಾಯಾಳುಗಳನ್ನು ಇಲ್ಲಿಗೆ ಕ್ಷಿಪ್ರವಾಗಿ ಕರೆತರಲ ಸಾಧ್ಯವಾಗಲಿದೆ. ನಗರದಲ್ಲಿ ಮಣಿಪಾಲ್ ಆಸ್ಪತ್ರೆ ಮತ್ತು ಅಪೊಲೊ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ಸೇವೆ ಈಗಾಗಲೇ ಲಭ್ಯವಿದೆ. ದೇಶದ ನಾನಾ ಭಾಗಗಳಿಂದಲೂ ಹೆಲಿಪ್ಯಾಡ್ ಸೇವೆ ಮೂಲಕ ರೋಗಿ/ಗಾಯಾಳುಗಳು ಇಲ್ಲಿಗೆ ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+