ಮುಂಬೈ : ಕಳ್ಳನಿಂದ ಸ್ಪೇನ್ ಮಹಿಳೆ ಅತ್ಯಾಚಾರ

German woman raped in Mumbai at knife point
ಮುಂಬೈ, ನ. 5 : ಬಾಂದ್ರಾದಲ್ಲಿರುವ ಅಪಾರ್ಟ್‌ಮೆಂಟೊಂದರಲ್ಲಿ ಕಳ್ಳನೊಬ್ಬ 27 ವರ್ಷದ ಸ್ಪೇನ್‌ನ ಮಹಿಳೆಯ ಕುತ್ತಿಗೆಗೆ ಚೂರಿಯನಿಟ್ಟು ಎರಡು ಬಾರಿ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಒಳಉಡುಪುಗಳನ್ನು ಸೇರಿ ಸಿಕ್ಕಿದ್ದನ್ನು ದೋಚಿಕೊಂಡು ಪರಾರಿಯಾದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಬೆಳಿಗ್ಗೆ ಸುಮಾರು 4 ಗಂಟೆ ಸಮಯ ಅತ್ಯಾಚಾರವೆಸಗಿ ಬೆಲೆಬಾಳುವ ವಸ್ತುಗಳೊಂದಿಗೆ ಕಾಲುಕಿತ್ತಿದ್ದಾನೆ ಎಂದು ಸ್ಕಾಲರ್‌ಶಿಪ್ ಮೇಲೆ ಸಂಗೀತ ಕಲಿಯಲು ಮುಂಬೈಗೆ ಬಂದಿದ್ದ ಸ್ಪೇನ್‌ನ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಅತ್ಯಾಚಾರವೆಸಗಿದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಬಲಾತ್ಕಾರಕ್ಕೊಳಗಾದ ಮಹಿಳೆ ಹೇಳುವುದೇನೆಂದರೆ, ಪಶ್ಚಿಮ ಬಾಂದ್ರಾದಲ್ಲಿರುವ ಶ್ರೀಮಂತರ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಬಾಡಿಗೆ ಪಡೆದಿರುವ ಫ್ಲಾಟ್‌ನಲ್ಲಿ ಮಲಗಿದ್ದಾಗ, ಪೈಪ್ ಮುಖಾಂತರ ಕಟ್ಟಡ ಹತ್ತಿ, ತೆರೆದ ಕಿಟಕಿಯ ಮೂಲಕ ಮನೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ತನ್ನ ಮೇಲೆ ದಾಳಿ ಮಾಡಿ, ಕತ್ತಿಗೆ ಚಾಕು ಇಟ್ಟು ಮಾನ ಅಪಹರಿಸಿದ್ದಾನೆ. ಆತ ತನ್ನ ಮುಖಕ್ಕೆ ಕರ್ಚೀಫ್ ಕಟ್ಟಿದ್ದ.

ಮೊದಲು ಆ ಮಹಿಳೆ ಆತನಿಂದ ತಪ್ಪಿಸಿಕೊಂಡು ಮುಂದಿನ ಮನೆ ಬಾಗಿಲು ಬಡಿದು ಅವರನ್ನು ಕೂಗಲು ಯತ್ನಿಸಿದ್ದಾರೆ. ಆದರೆ, ಆ ಮನೆಯಲ್ಲಿ ಯಾರೂ ಇರಲಿಲ್ಲ. ಸ್ಪೇನ್ ಮಹಿಳೆಯನ್ನು ಮನೆಯೊಳಗೆ ಎಳೆದುತಂದ ಕಳ್ಳ ಆಕೆಯನ್ನು ಚಾಕು ತೋರಿಸಿ ವಿವಸ್ತ್ರಳಾಗಿಸಿ ಅತ್ಯಾಚಾರವೆಸಗಿದ್ದಾನೆ. ಕೆಲವಸ್ತುಗಳನ್ನು ಬಾಚಿಕೊಂಡನಂತರ ಮತ್ತೆ ಅವಳನ್ನು ಬಲಾತ್ಕರಿಸಿದ್ದಾನೆ. ತಾನು ಬಾತ್ ರೂಮಿಗೆ ಹೋಗಬೇಕೆಂದು ಆಕೆ ಗೋಗರೆದಾಗ ಕಳ್ಳ ಹೋಗಬಿಟ್ಟಿದ್ದಾನೆ.

ಬಾತ್ ರೂಂ ಒಳಹೋಗುತ್ತಿದ್ದಂತೆ ಮಹಿಳೆ ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ಹೆದರಿದ ಕಳ್ಳ ಆಕೆ ಬಿಚ್ಚಿಟ್ಟಿದ್ದ ಒಳಉಡುಪು, ರಾತ್ರಿ ಗೌನ್ ಸಮೇತ ಮನೆಯನ್ನು ಹೊರಗಿನಿಂದ ಬಾಗಿಲುಹಾಕಿ ಪರಾರಿಯಾಗಿದ್ದಾನೆ. ಕಳ್ಳ ಕೆಲವು ಅಮೆರಿಕನ್ ಡಾಲರ್, ಒಂದಿಷ್ಟು ರುಪಾಯಿ ಮತ್ತು ಕ್ಯಾಮೆರಾ ತೆಗೆದುಕೊಂಡು ಹೋಗಿದ್ದಾನೆ. ಈ ಘಟನೆ ಬೆಳಗಿನ ಜಾವ 3.30ರಿಂದ 4.30ರೊಳಗೆ ನಡೆದಿದೆ.

ಅತ್ಯಾಚಾರಕ್ಕೊಳಗಾದ ನಂತರ ಆಕೆ ಸುಮಾರು 1 ಗಂಟೆಯ ಕಾಲ ಸ್ನಾನದ ಮನೆಯಲ್ಲಿ ಕುಳಿತುಕೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸುಮಾರು ಹೊತ್ತಿನ ನಂತರ ಯಾರೋ ದಾರಿಹೋಕರಿಗೆ ಇದು ತಿಳಿದು ಪೊಲೀಸರನ್ನು ಕರೆತಂದು ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ನಂತರ ಪಶ್ಚಿಮ ಬಾಂದ್ರಾದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ಘಟನೆಯ ಕುರಿತು ದೂರು ನೀಡಿದ್ದಾರೆ. ಮಹಿಳೆ ವಿದೇಶಿಯವಳಾದ್ದರಿಂದ ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ಕಳ್ಳನನ್ನು ಆದಷ್ಟು ಬೇಗನೆ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೂರು ಸ್ವೀಕರಿಸಿದ ನಂತರ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+