ವಿಮಾನ ವಿಳಂಬಕ್ಕೆ 22 ಸಾವಿರ ರು ದಂಡ

ಕಠ್ಮಂಡುವಿನಿಂದ ನವದೆಹಲಿಗೆ ತೆರಳಬೇಕಿದ್ದ ಅಂಧ ಪ್ರಯಾಣಿಕರೊಬ್ಬರಿಗೆ ಪರಿಹಾರ ರೂಪದಲ್ಲಿ ಸುಮಾರು 22,000 ಸಾವಿರ ರು ದಂಡ ಕಟ್ಟಬೇಕಾದ ಪರಿಸ್ಥಿತಿಯನ್ನು ಸ್ಪೈಸ್ ಜೆಟ್ ಸಂಸ್ಥೆ ಎದುರಿಸುತ್ತಿದೆ.
ಚೆನ್ನೈ ಮೂಲದ ವಿಮಾನಯಾನ ಸಂಸ್ಥೆ ನೇಪಾಳದ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ವಿಮಾನ ಹಾರಾಟ ಮಾಡಲು ಆಗಿರಲಿಲ್ಲ.
ವಿಮಾನ ವಿಳಂಬಕ್ಕೆ ಏರ್ ಟ್ರಾಫಿಕ್ ಹೆಚ್ಚಳ ಕಾರಣ ಎಂದು ಸ್ಪೈಸ್ ಜೆಟ್ ಹೇಳಿದ್ದರೂ ಪ್ರಯಾಣಿಕರಿಗೆ ಸೂಕ್ತ ಉತ್ತರ ಹಾಗೂ ತನ್ನ ಹೇಳಿಕೆಗೆ ತಕ್ಕ ಸಾಕ್ಷ್ಯ ಒದಗಿಸಿಲ್ಲ ಎಂಬ ಕಾರಣಕ್ಕೆ ವಿಮಾನಯಾನ ಸಂಸ್ಥೆಗೆ ದಂಡ ವಿಧಿಸಲಾಗಿದೆ ಎಂದು ನೈಋತ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಹೇಳಿದೆ.
ದೆಹಲಿ ಮೂಲದ ಜೈ ಕಿಶನ್ ಅಗರವಾಲ್ ಅವರ ಪ್ರಯಾಣಕ್ಕೆ ಅಡ್ಡಿ ಉಂಟು ಮಾಡಿದ ಸ್ಪೈಟ್ ಜೆಟ್ ಸಂಸ್ಥೆ 20,000 ರು ಪರಿಹಾನ ಧನ ಹಾಗೂ 2,000 ರು ಮೊಕದ್ದಮೆ ಖರ್ಚು ವೆಚ್ಚವನ್ನು ಭರಿಸಬೇಕು ಎಂದು ಗ್ರಾಹಕರ ವೇದಿಕೆಯ ಮುಖ್ಯಸ್ಥ ನರೇಂದ್ರ ಕುಮಾರ್ ಹೇಳಿದ್ದಾರೆ.
2010ರ ಸೆಪ್ಟೆಂಬರ್ 9 ರಂದು ಅಗರವಾಲ್ ಅವರು ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರ ಜೊತೆಗೆ ಕಠ್ಮಂಡುವಿನಿಂದ ದೆಹಲಿಗೆ ಪ್ರಯಾಣಿಸಬೇಕಾಗಿತ್ತು. ಆದರೆ, ಸ್ಪೈಟ್ ಜೆಟ್ ವಿಮಾನ ವಿಳಂಬವಾಗಿತ್ತು. ವಿಳಂಬದ ಬಗ್ಗೆ ಸ್ಪೈಟ್ ಜೆಟ್ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿರಲಿಲ್ಲ.
ಅಲ್ಲದೆ, ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲದೆ ವಿಮಾನ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ ಎಂದು ಅಗರವಾಲ್ ದೂರಿದ್ದರು.
ಅಂದು ಬೆಳಗ್ಗೆ 10.45ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಅಗರ್ ವಾಲ್ ಅವರ ಕುಟುಂಬ ಬೆಳಗ್ಗೆ 8 ಗಂಟೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.ಆರಂಭದಲ್ಲಿ ಕೇವಲ 15 ನಿಮಿಷ ವಿಳಂಬವಾಗಲಿದೆ ಎಂದು ಹೇಳಿದರು ಅದರೆ, ವಿಮಾನ ಹೊರಡುವಷ್ಟರಲ್ಲಿ ಮಧ್ಯಾಹ್ನ 3.24 ಗಂಟೆಯಾಗಿತ್ತು.
ಆದರೆ, ಏರ್ ಟ್ರಾಫಿಕ್ ಹೆಚ್ಚಾಗಿದ್ದ ಕಾರಣ ವಿಮಾನ ಟೇಕ್ ಆಫ್ ಮಾಡಲು ಸಾಧ್ಯವಾಗಲಿಲ್ಲ. ವಿಮಾನಯಾನ ಕಾಯ್ದೆ ಪ್ರಕಾರ ವಿಳಂಬ ಸಮಯದಲ್ಲಿ ಅನುಸರಿಸಬೇಕಾದ ಕ್ರಮವನ್ನು ಪಾಲಿಸಲಾಗಿದೆ ಎಂದು ಸ್ಪೈಸ್ ಜೆಟ್ ವಾದಿಸಿತ್ತು.
ಕೊನೆಗೆ ಪ್ರಕರಣ ಗ್ರಾಹಕರ ವೇದಿಕೆ ಮೆಟ್ಟಿಲೇರಿತ್ತು,ಪ್ರಯಾಣಿಕ ಅಗರವಾಲ್ ಪರ ತೀರ್ಪು ಹೊರಬಿದ್ದಿದೆ. (ಪಿಟಿಐ)












Click it and Unblock the Notifications