ಚಂಡಮಾರುತಕ್ಕೆ ಚೆಂದದ ಹೆಸರು ಏಕೆ?

ಚಂಡಮಾರುತಗಳ ಹೆಸರನ್ನು ಕೇಳಿದರೆ ಏಕೆ ಚೆಂದದ ಹೆಸರು ನೀಡುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಲೈಲಾ, ಫೇಟ್, ಗಿರಿ, ಐಲಾ, ಫಾನ್ ಭಾರತದಲ್ಲಿ ಕಾಣಿಸಿಕೊಂಡಿತ್ತು. ಅಮೆರಿಕದಲ್ಲಿ ಕತ್ರೀನಾ ಹರಿಕೇನ್ ಡ್ಯಾನ್ಸ್ ಮಾಡಿದ್ದಳು.
ಚಂಡಮಾರುತ/ಬಿರುಗಾಳಿಗೆ ಯಾರು ಹೆಸರಿಡುತ್ತಾರೆ? ನಾಮಕರಣ ಹಿಂದಿನ ವೈಜ್ಞಾನಿಕ ಹಿನ್ನೆಲೆ ಏನು? ಮುಂದೆ ನೋಡೋಣ..
ಭಾರತ ಹವಾಮಾನ ಇಲಾಖೆ (IMD) ಚಂಡಮಾರುತಗಳಿಗೆ ಹೆಸರಿಡಲು ಆರಂಭಿಸಿದ್ದು ತೀರಾ ಇತ್ತೀಚೆಗೆ ಎನ್ನಬಹುದು. ಕಳೆದ ವರ್ಷದಿಂದ ಚಂಡಮಾರುತಗಳಿಗೆ ಹೆಸರಿಡಲು ಆರಂಭಿಸಿದ್ದೇವೆ. ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಬಳಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಅದರೆ, ಚಂಡಮಾರುತಗಳಿಗೆ ಹೆಸರಿಡಲು ಒಂದೇ ಬಗೆಯ ವಿಧಾನ ಅನುಸರಿಸುವುದಿಲ್ಲ. ವಿವಿಧ ರೀತಿ ವ್ಯವಸ್ಥೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಕ್ಯಾಥೊಲಿಕ್ ಸಂತರ ಹೆಸರುಗಳನ್ನು ಬಳಸಲಾಗುತ್ತದೆ.
ನಂತರ ಚಂಡಮಾರುತ ಮೇಲೇಳುವ ಪ್ರದೇಶದ ಅಕ್ಷಾಂಶ, ರೇಖಾಂಶಗಳ ಅಂಕಿ ಅಂಶ ಆಧಾರದ ಮೇಲೆ ಹೆಸರಿಡಲು ಆರಂಭಿಸಲಾಯಿತು. ಅದರೆ, ಇದು ವಿಜ್ಞಾನಿಗಳಿಗೆ ಕೊಂಚ ತ್ರಾಸದಾಯಕ ವ್ಯವಸ್ಥೆಯಾಗಿ ಕಂಡು ಬಂದಿತು.
ಬಿರುಗಾಳಿ/ಚಂಡಮಾರುತಗಳಿಗೆ ಮಹಿಳೆಯ ಹೆಸರು ಏಕೆ?
ಇದು ಕೂಡಾ ಕುತೂಹಲಕಾರಿಯಾಗಿದೆ.ಚಂಡಿಯಂತೆ ಆಡುವ ಮಾರುತಗಳಿಗೆ ಸ್ತ್ರೀಲಿಂಗ ನಾಮಗಳೇ ಇದೆ ಏಕೆ? ಎಂಬ ಪ್ರಶ್ನೆ ಥಟ್ಟನೆ ಬರುವುದು ಸಹಜ. ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು.
WMO ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಬದಲಾಯಿಸುತ್ತಾ ಹೋಗಲು ನಿರ್ಧರಿಸಿತು. ಇದು ಕೂಡಾ ಚಂಡಮಾರುತ ಹೊಡೆತಕ್ಕೆ ಸಿಲುಕಿದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು WMO ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.
ಪುರುಷರ ಹೆಸರನ್ನು ಕೆಲವೊಮ್ಮೆ ಬಳಸಿದ್ದುಂಟು: 70ರ ದಶಕದ ಕೊನೆಗೆ ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಫ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು.
ಚಂಡ ಮಾರುತದ ಹೊಡೆತಕ್ಕೆ ಸಿಕ್ಕ ರಾಷ್ಟ್ರಗಳ ಭಾಷೆ ಆಧಾರಿಸಿ ಹೆಸರುಗಳನ್ನು ಸೂಚಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಯುಎಸ್ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.
ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ(WMO) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( Q, U, X, Y ಹಾಗೂ Z ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ.
2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಧಿಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ.
ಕೆಲವೊಮ್ಮೆ ಹೆಸರಿಡುವ ಗೊಂದಲದಲ್ಲಿ ಚಂಡಮಾರುತಗಳಿಗೂ 'ಐಡೆಂಟಿಟಿ' ಬಿಕ್ಕಟ್ಟು ತಲೆ ದೋರುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ ಕಷ್ಟ ಎನ್ನುತ್ತಾರೆ ತಜ್ಞರು.
ಭಾರತೀಯರು ಹವಾಮಾನ ಇಲಾಖೆಗೆ ಚಂಡಮಾರುತವನ್ನು ಹೆಸರಿಸುವ ಕಷ್ಟ ಅಷ್ಟಾಗಿ ತಲೆದೋರಿಲ್ಲ. ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಏಳುವ ಭಾರಿ ಅಲೆಗಳಿಗೆ ಸುಲಭವಾಗಿ ಹೆಸರಿಡುವುದನ್ನು ಇಲಾಖೆ ಅಭ್ಯಾಸ ಮಾಡಿಕೊಂಡಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications