ಮೋದಿ ಹ್ಯಾಟ್ರಿಕ್ ಗ್ಯಾರಂಟಿ: ರಾಜದೀಪ್ ಸರದೇಸಾಯಿ

ರಾಜದೀಪ್ ಸರದೇಸಾಯಿಯ CNN-IBN ನ್ಯೂಸ್ ಚಾನೆಲ್ ಪರವಾಗಿ Centre for the Study of Developing Societies ಸಂಸ್ಥೆ ನಡೆಸಿರುವ ತಾಜಾ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ಮೂರನೇ ಬಾರಿಗೆ ಸಿಎಂ ಆಗುವುದು ನಿಚ್ಚಳವಾಗಿದೆ.
ಸಮೀಕ್ಷೆಯನ್ನು ಆಧರಿಸಿ ರಾಜದೀಪ್ ಸರದೇಸಾಯಿ ಖುದ್ದಾಗಿ ತಮ್ಮ ಚಾನೆಲಿನಲ್ಲಿ ಸುದ್ದಿ ಬಿತ್ತರಿಸಿದನ್ನು ಕಂಡ ಮಹಾಜನತೆಗೆ - ದಶಕದ ಹಿಂದೆ ರಾಜದೀಪ್ ಎದುರು ಸಂದರ್ಶನಕ್ಕೆ ಕುಳಿತಿದ್ದ ಇದೇ ನರೇಂದ್ರ ಮೋದಿ ಅವರು ಸರದೇಸಾಯಿಯ ಕಿರಿಕಿರಿ ಪ್ರಶ್ನೆಗಳಿಗೆ ಬೇಸತ್ತು ಲೈವ್ ನಲ್ಲಿಯೇ ಎದ್ದು ಹೋಗಿದ್ದು - ಜ್ಞಾಪಕಕ್ಕೆ ಬಂದಿರಲೂ ಬಹುದು.
ದಾಖಲಾರ್ಹವೆಂದರೆ ಆ ಘಟನೆ ನಡೆದ ನಂತರ ಮೋದಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುವುದನ್ನೇ ಬಿಟ್ಟುಬಿಟ್ಟಿದ್ದರು. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನವನ್ನು ನೆಚ್ಚಿಕೊಂಡು ಸಾಮಾಜಿಕ ಸಂಪರ್ಕ ಜಾಲದ ಮೂಲಕ ತಮ್ಮ ಭಾವನೆಗಳನ್ನು ಜಗಜ್ಜಾಹೀರುಗೊಳಿಸಿತೊಡಗಿದರು.
ಇನ್ನು ಸದರಿ ಸಮೀಕ್ಷೆಯ ವಿಚಾರಕ್ಕೆ ಬಂದರೆ ಈಗಾಗಲೇ ಬಹುತೇಕ ಮಾಧ್ಯಮ ಸಂಸ್ಥೆಗಳು ಘೋಷಿಸಿರುವಂತೆ ನರೇಂದ್ರ ಮೋದಿಗೆ ಮತ್ತೆ ಮುಖ್ಯಮಂತ್ರಿಯಾಗುವ ಯೋಗ ಹೆಚ್ಚಾಗಿದೆ. ಮತದಾರ ಸ್ಪಷ್ಟವಾಗಿ ಮೋದಿಗೇ ಜೈ ಎನ್ನುತ್ತಿದ್ದಾನೆ ಎಂಬುದು ಈ ಮಾಧ್ಯಮ ಸಮೀಕ್ಷೆಗಳ ತಿರುಳಾಗಿದೆ.
ಮೋದಿ 11 ವರ್ಷ ಕಾಲ ( ಮೊನ್ನೆ ಅಕ್ಟೋಬರ್ 7ಕ್ಕೆ ) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವುದು ಗಮನಾರ್ಹ. ಜ್ಯೋತಿ ಬಸು (ಪಶ್ಚಿಮ ಬಂಗಾಳ) ಮೋಹನ ಲಾಲ್ ಸುಖಾಡಿಯಾ (ರಾಜಸ್ಥಾನ) ನಂತರ ದೀರ್ಘಾವಧಿಗೆ ಸಿ ಎಂ ಆಗಿರುವವರು ನರೇಂದ್ರ ಮೋದಿ.
ಕುತೂಹಲದ ಸಂಗತಿಯೆಂದರೆ CNN-IBN ಸಮೀಕ್ಷಾ ವರದಿ ಪ್ರಕಾರ ಮೋದಿ ಮುಖ್ಯಮಂತ್ರಿ ಗಾದಿಗೇರುವ ಅವಕಾಶ ಶೇ. 50ರ ಗಡಿ ದಾಟಿದ್ದರೆ ಿತರರು ಒಂದಂಕಿಯನ್ನೂ ದಾಟಿಲ್ಲ !
ಮರೆತ ಮಾತು: ಅಂದಹಾಗೆ ಇಂದು ಹಿರಿಯ ಪತ್ರಕರ್ತ ರಾಜದೀಪ್ ಸರದೇಸಾಯಿ ಮತ್ತು 'ಉಕ್ಕಿನ ಮನುಷ್ಯ' ಸರದಾರ ಪಟೇಲ್ ಅವರ ಜನ್ಮ ದಿನ.












Click it and Unblock the Notifications