Depression: ಬೆಂಗಳೂರು ವಿಪ್ರೋ ಮಹಿಳಾ ಟೆಕ್ಕಿ ಬಲಿ

ನಗರದ ದೋಮಲಗೂಡುನಲ್ಲಿರುವ ತನ್ನ ತಾಯಿಯ ಮನೆಗೆ ದಸರಾ ಹಬ್ಬಕ್ಕೆಂದು ಬಂದಿದ್ದ ಸಂಧ್ಯಾ, ಸಾವಿಗೆ ಶರಣಾಗಿದ್ದಾರೆ. ಸಂಧ್ಯಾ ಸೋದರ ಸಹ ಟೆಕ್ಕಿಯಾಗಿದ್ದು, ನಿನ್ನೆ ಮಂಗಳವಾರ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅಕ್ಕ ಸಂಧ್ಯಾ ಎಷ್ಟು ಹೊತ್ತಾದರೂ ತನ್ನ ರೂಮಿನ ಬಾಗಿಲು ತೆರೆದಿರಲಿಲ್ಲ.
ಇದರಿಂದ ಅನುಮಾನಗೊಂಡು ಬಾಗಿಲು ಒಡೆದು ಒಳ ನೋಡಿದಾಗ ಸಂಧ್ಯಾ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಕಂಡುಬಂದಿದೆ. ಮಾನಸಿಕ ಖಿನ್ನತೆಯಿಂದ ಅಕ್ಕ ಸಾವಿಗೆ ಶರಣಾಗಿರಬಹುದು ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
ಸ್ಥಳದಲ್ಲಿ ಯಾವುದೇ ಮರಣ ಪತ್ರ ದೊರೆತಿಲ್ಲ. ಸಂಧ್ಯಾ ಎಂದಿಗೂ ತನ್ನ ಸಮಸ್ಯೆಗಳನ್ನು ಯಾರೊಬ್ಬರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.











Click it and Unblock the Notifications