ಜೈಲಿನಲ್ಲಿರಬೇಕಾಗಿದ್ದವ ಸಚಿವನಾದುದು ಎಷ್ಟುಸರಿ?

Anwar Manippady on Rehaman Khan induction into Union Cabinet
ಬೆಂಗಳೂರು, ಅ 29: ವಕ್ಫ್ ಮಂಡಳಿಯ ಆಸ್ತಿ ಲೂಟಿ ಹೊಡೆದು, ಬಡವರು ಕಟ್ಟಿ ಬೆಳೆಸಿದ ಬ್ಯಾಂಕ್ ಅನ್ನು ಲೂಟಿ ಮಾಡಿದ ವ್ಯಕ್ತಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿ ಗೌರವಿಸುವುದೆಂದರೆ ಅದು ಎಷ್ಟರ ಮಟ್ಟಿಗೆ ಸರಿಯೆಂದು ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

ನಾನು ಹೇಳುತ್ತಿರುವುದು ಅಲ್ಪಸಂಖ್ಯಾತ ಕಲ್ಯಾಣ ಖಾತೆಯ ಸಚಿವರಾಗಿ ಆಯ್ಕೆಯಾಗಿರುವ ರೆಹಮಾನ್ ಖಾನ್ ಬಗ್ಗೆ. ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ರೆಹಮಾನ್ ಖಾನ್ ಅವರಿಗೆ ಜೈಲು ಶಿಕ್ಷೆ ನೀಡಬೇಕಿತ್ತು, ಆದರೆ ಕಾಂಗ್ರೆಸ್ ಸರಕಾರ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿ ಗೌರವಿಸಿದೆ.

ಮುಸಲ್ಮಾನ ಸಮುದಾಯದ ಜನ ಕಷ್ಟಪಟ್ಟು ಬೆಳೆಸಿದ ಅಮಾನತ್ ಬ್ಯಾಂಕ್ ಅನ್ನು ಲೂಟಿ ಮಾಡಿದ ಅಪಖ್ಯಾತಿ ಅವರ ಮೇಲಿದೆ.

ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಸಲ್ಮಾನ ಸಮುದಾಯದ ಬ್ಯಾಂಕ್ ಅನ್ನು ರೆಹಮಾನ್ ಖಾನ್ ಅವನತಿಯತ್ತ ತಂದು ನಿಲ್ಲಿಸಿದ್ದಾರೆ ಅನ್ವರ್ ಮಾನಿಪ್ಪಡಿ ಹೇಳಿದ್ದಾರೆ.

ಬಿಜಾಪುರದ ವಕ್ಫ್ ಮಂಡಳಿಯ ಆಸ್ತಿ ಲೂಟಿ ಹೊಡೆದ ಬಗ್ಗೆ ಕೂಡಾ ಇವರ ಮೇಲೆ ಲೋಕಾಯುಕ್ತರು ಎಫ್ಐಆರ್ ದಾಖಲಿಸಿದ್ದಾರೆ.

ಅಮಾನತ್ ಬ್ಯಾಂಕಿನ ಹಣವನ್ನು ದೇವಾಂಗ ಸಂಘದವರಿಗೆ ಸಾಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ತನ್ನ ಆಪ್ತರಿಗೆ ಬೇಕಾಬಿಟ್ಟಿ ಬ್ಯಾಂಕಿನ ಹಣ ನೀಡಿ ಲೂಟಿ ಮಾಡಿದ್ದಾರೆಂದು ಮಾನಿಪ್ಪಾಡಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋನಿಯಾ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾಮಾಣಿಕರಂತೆ ವರ್ತಿಸಿದ ರೆಹಮಾನ್ ಖಾನ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದು ತಪ್ಪು.

ಇಂತಹ ಕಳಂಕಿತ ವ್ಯಕ್ತಿ ಜೈಲಿನಲ್ಲಿ ಇರಬೇಕಾಗಿರುವುದೇ ಸೂಕ್ತ ಎಂದು ಮಾನಿಪ್ಪಾಡಿ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ದ ಮಾತನಾಡುವ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ರೆಹಮಾನ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ರಾಜ್ಯದ ಮುಸಲ್ಮಾನರಿಗೆ ಉತ್ತರ ನೀಡಬೇಕಿದೆ.

ಅಮಾನತ್ ಬ್ಯಾಂಕ್ ಲೂಟಿ ಮಾಡಿರುವ ಅಂಕಿಅಂಶವನ್ನು ರಿಸರ್ವ್ ಬ್ಯಾಂಕ್ ಕೂಡಾ ತನ್ನ ವರದಿಯಲ್ಲಿ ಸ್ಪಷ್ಟ ಪಡಿಸಿದೆ ಎಂದು ಅನ್ವರ್ ಮಾನಿಪ್ಪಾಡಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+