ಅಂತರ್ಜಾಲದಲ್ಲಿ ಮೋದಿ ಎಷ್ಟು ಜನಪ್ರಿಯ ಗೊತ್ತಾ?

gujarat-narendra-modi-twitter-one-million-fan-following
ಅಹಮದಾಬಾದ್, ಅ.25: ರಾಜತಾಂತ್ರಿಕವಾಗಿ ವಿದೇಶಿ ಸರಕಾರಗಳ ಜತೆಗೂ ಸ್ನೇಹ ಸಾಧಿಸುತ್ತಿರುವ ಗುಜರಾತ್ ಸಿಎಂ ನರೇಂದ್ರ ಮೋದಿಗೆ ಈಗ 10 ಲಕ್ಷ twitter followers ಇದ್ದಾರೆ!

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ tech savvy ಮೋದಿಗೆ ಇದು ಹೆಚ್ಚು ಪರಿಣಾಮಕಾರಿ ಎನಿಸಲಿದೆ ಎಂದು ಚುನಾವಣೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗುತ್ತಿರುವ ಮೋದಿ ಡಿಸೆಂಬರ್ ಚುನಾವಣೆ ವೇಳೆಗೆ ಇನ್ನೂ ಹೆಚ್ಚು ಸಂಖ್ಯೆಯಲ್ಲಿ followersಗಳನ್ನು ಹೊಂದುವ ಅಂದಾಜಿದೆ.

10 ಲಕ್ಷ ಮೋದಿ followerಗಳನ್ನು ಗಳಿಸಿದ ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ 'ನಮೋ ನಮಃ' ಅಂದಿದ್ದಾರೆ - A million followers! These are not mere numbers but it signifies your love and affection. Heartfelt thanks to you all ಎಂದು ಮೋದಿ ನಿನ್ನೆ (ಅ.24ರಂದು) ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗಳನ್ನು ಗಮನಿಸಿದರೆ ಮೋದಿಯ ಪ್ರಗತಿಪರ ಯೋಜನೆಗಳಿಗೆ ಜಾಗತಿಕ ಮತ್ತು ದೇಶೀಯಮಟ್ಟದಲ್ಲಿ ಮನ್ನಣೆ ದೊರೆತಿದೆ ಎನ್ನಬಹುದು. ಅಂದಹಾಗೆ ಮೋದಿ 2009ರಲ್ಲಿ ತಮ್ಮ Twitter ಖಾತೆ ತೆರೆದರು. 2010ರ ವೇಳೆಗೆ 1 ಲಕ್ಷ ಅಭಿಮಾನಿಗಳನ್ನು ಸಂಪಾದಿಸಿದರು ಎಂದು ಬಿಜೆಪಿಯ ಮಾಧ್ಯಮ ಸಲಹೆಗಾರ ಜಗದೀಶ್ ಭಾವಸಾರ ಹೇಳಿದ್ದಾರೆ.

Twitter, Blogಗಳ ಮೂಲಕ ತಮ್ಮ ರಾಜಕೀಯ ವಿಚಾರಧಾರೆಯನ್ನು ಪಸರಿಸುವ ಮೋದಿ, ಕಳೆದ ನವೆಂಬರಿನಿಂದೀಚೆಗೆ 6 ಲಕ್ಷ followerಗಳನ್ನು ತಮ್ಮವರನ್ನಾಗಿಸಿಕೊಂಡಿದ್ದಾರೆ. ಡಿಸೆಂಬರ್ 13 ಮತ್ತು 17ರಂದು ಎರಡು ಹಂತಗಳಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+