ದೇವೇಗೌಡ, ಯಡಿಯೂರಪ್ಪ ವಿರುದ್ದ ತನಿಖೆಗೆ ಆದೇಶ

494 ಪುಟಗಳ ಆದೇಶ ನೀಡಿದ ಲೋಕಾಯುಕ್ತ ಕೋರ್ಟ್, ನೈಸ್ ರಸ್ತೆ ಟೋಲ್ ಮುಟ್ಟುಗೋಲು ಹಾಕಿಕೊಳ್ಳಲು ಮಧ್ಯಂತರ ಆದೇಶ ನೀಡಿದೆ. ಕಳೆದ ಎರಡು ವರ್ಷದಿಂದ ಸಂಗ್ರಹಿಸಲಾಗಿದ್ದ ಟೋಲ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲು ಲೋಕಾಯುಕ್ತ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
30 ಜನರ ಪಟ್ಟಿಯಲ್ಲಿ ಆರ್ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್, ಅಶೋಕ್ ಖೇಣಿ, ಸಿ ಎಂ ಉದಾಸಿ ಕೂಡಾ ಸೇರಿದ್ದಾರೆ. ಎಡಿಜಿಪಿ ಮಟ್ಟದ ತನಿಖೆ ನಡೆಸಲು ಆದೇಶ ನೀಡಿದ್ದು ಈ ಸಂಬಂಧ 4 ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲು ಆದೇಶಿಸಿದೆ.
ಅಲ್ಲದೇ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡ 6699 ಎಕರೆ ಜಮೀನನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಲು ತನ್ನ ಆದೇಶದಲ್ಲಿ ತಿಳಿಸಿದೆ. ಒಟ್ಟು 103 ಜನರ ವಿರುದ್ಧ ಸಮಾಜ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ದೂರು ಸಲ್ಲಿಸಿದ್ದರು. ಅವರಲ್ಲಿ 73 ಜನರನ್ನು ತನಿಖೆಯಿಂದ ಕೈಬಿಡಲಾಗಿದೆ.












Click it and Unblock the Notifications