ಉಡುಪಿ ಯುವತಿಗೆ ಫೇಸ್‌ಬುಕ್ ಕಾಟ ಯುವಕ ಸೆರೆ

ಕೊನೆಗೆ ಆ ಯುವತಿಯ ಚಿತ್ರವನ್ನು ತನ್ನ ಫೋಟೋ ಜತೆ ಮಾರ್ಫ್ ಮಾಡಿ, ತಾವಿಬ್ಬರೂ ಸತಿ-ಪತಿಗಳಾಗಿದ್ದೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಆ ಯುವತಿಯನ್ನು ಗೋಳಾಡಿಸಿದ. ಇದರಿಂದ ಬೇಸತ್ತ ಯುವತಿ ಕೊನೆಗೆ ಪೊಲೀಸರ ಸಹಾಯ ಯಾಚಿಸಿದಳು. ಕೊನೆಗೆ, ಹೆಚ್ಚಿನ ಅನಾಹುತವಾಗುವ ಮೊದಲೇ ಅವನಿಂದ ಮುಕ್ತಿ ಪಡೆಯುವಲ್ಲಿ ಯಶಸ್ವಿಯೂ ಆದಳು.
ಆ ಭೂಪ ಏನು ಮಾಡಿದ್ದ ಅಂದರೆ ಸದರಿ ಯುವತಿಯ ಫೊಟೋವನ್ನು ಫೇಸ್ ಬುಕ್ ನಿಂದ ಡೌನ್‌ಲೋಡ್ ಮಾಡಿಕೊಂಡ. ಅದನ್ನು ಮುಂದಿಟ್ಟುಕೊಂಡು ಆಕೆಯ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಕೊನೆಗೆ ಯುವತಿಯ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಉಡುಪಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಗಾಂಧಿನಗರದ ಮಣಿಕಂಠ ಭಕ್ತ ಎಂಬಾತ ಪ್ರಕರಣದ ಸೂತ್ರಧಾರ. ಈತ ಫೇಸ್ ಬುಕ್ ಖಾತೆ ಹೊಂದಿರುವ ಉಡುಪಿಯ ಯುವತಿ ಜತೆ ಗೆಳೆತನ ಸಾಧಿಸಿದ್ದ. ನಂತರ ಆಕೆಯ ಪ್ರೊಫೈಲ್‌ನಲ್ಲಿರುವ ಫೊಟೋಗಳನ್ನು ಡೌನ್‌ಲೋಡ್ ಮಾಡಿಕೊಂಡ. ಅಲ್ಲದೆ ಅದನ್ನು ತನ್ನ ಭಾವಚಿತ್ರದ ಜತೆಗೂಡಿಸಿ, ತಾವಿಬ್ಬರೂ ಗಂಡ-ಹೆಂಡತಿ ಎನ್ನುವಂತೆ ಬಿಂಬಿಸಿ, ಫೇಸ್ ಬುಕ್‌ಗೆ ಅಪ್‌ಲೋಡ್ ಮಾಡಿದ್ದ ಎನ್ನಲಾಗಿದೆ.
ಯುವತಿಯು ಅ. 16ರಂದು ಫೇಸ್ ಬುಕ್ ಅಕೌಂಟ್ ಪರಿಶೀಲನೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮಣಿಕಂಠ ಭಕ್ತ ಇಷ್ಟಕ್ಕೇ ಸುಮ್ಮನಾಗದೆ ಯುವತಿಯನ್ನು ಮದುವೆಯಾಗಿದ್ದೇನೆ ಎಂದು ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದು, ನಿರಂತರ ಬ್ಲ್ಯಾಕ್ ಮೇಲ್ ಮಾಡುತ್ತಾ ಆಕೆಗೆ ಜೀವ ಬೆದರಿಕೆ ಒಡ್ಡಿದ್ದ.












Click it and Unblock the Notifications