ತಿಮ್ಮಪ್ಪನಿಗೆ ಮತ್ತೆ 5ಕೋಟಿ ನೀಡಿದ ಅನಾಮಿಕ ಉದ್ಯಮಿ

ತಿಮ್ಮಪ್ಪ ದರ್ಶನದ ಬಳಿಕ ಸದರಿ ಉದ್ಯಮಿ ದೇಗುಲ ಆಡಳಿತ ಮಂಡಳಿಯ (TTD) ವರಿಷ್ಠರ ಕೈಗೆ ಕಾಣಿಕೆಯ ರೂಪದಲ್ಲಿ 5 ಕೋಟಿ ರೂಪಾಯಿ ಮೌಲ್ಯದ ಡಿಮ್ಯಾಂಡ್ ಡ್ರಾಫ್ಟ್ ನೀಡಿದರು.
ಆದರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ಉದ್ಯಮಿ 2010ರಲ್ಲೂ ಇದೇ ರೀತಿಯ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದರು ಎಂದು TTD ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಭಾರತದ ಮಂದಿಗೆ ಪರಮ ದೈವನಾದ ತಿಮ್ಮಪ್ಪನಿಗೆ ಉತ್ತರ ಭಾರತದಲ್ಲೂ ಅಸಂಖ್ಯಾತ ಭಕ್ತರಿದ್ದಾರೆ. ಅಲ್ಲಿಯ ಮಂದಿ 'ತಿಮ್ಮಪ್ಪ'ನನ್ನು 'ಲಾರ್ಡ್ ಬಾಲಾಜಿ' ಎಂದೇ ಆರಾಧಿಸುತ್ತಾರೆ.












Click it and Unblock the Notifications