ಕಿಂಗ್ ಮಲ್ಯ ಖಾಸಗಿ 'ಪುಷ್ಪಕ ವಿಮಾನ' ಮುಟ್ಟುಗೋಲು?

ನವದೆಹಲಿ, ಅ.25: ಕಿಂಗ್ ವಿಜಯ್ ಮಲ್ಯ ಸಾಹೇಬರು ಸಂಪೂರ್ಣವಾಗಿ ಧರಾಶಾಹಿಯಾಗುವ ಕ್ಷಣಗಳು ಹತ್ತಿರವಾಗುತ್ತಿವೆ. ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್ (KFA) ಹಾರಾಟ ಅಧಿಕೃತವಾಗಿ ನೆಲಕಚ್ಚಿದ್ದು, ಉದ್ಯೋಗಿಗಳು ಪರದಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ವಿಜಯ್ ಮಲ್ಯ ಬಗ್ಗೆ ಕಿಂಚಿತ್ತೂ ದಯೆ ತೋರದೆ DGCA ಕಟ್ಟುನಿಟ್ಟಾಗಿದೆ. ಇನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (AAI) ವಿಜಯ್ ಮಲ್ಯ ಭಾರತಕ್ಕೆ ಮರಳುತ್ತಿದ್ದಂತೆ ಅವರನ್ನು ಹೊತ್ತುತರುವ ಇಂದ್ರ ಐಭೋಗದ ಖಾಸಗಿ ಏರ್ ಬಸ್ ವಿಮಾನವನ್ನು (VT-VJM) ಮುಟ್ಟುಗೋಲು ಹಾಕಿಕೊಳ್ಳಲು ಹವಣಿಸುತ್ತಿದೆ.

ಇದು ಕಿಂಗ್ ಸಾಹೇಬರ ಆಪ್ತ ಸಿಬ್ಬಂದಿಯ ನಿದ್ದೆಗೆಡಿಸಿದೆ. ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಗಳ ಹಾರಾಟ ಸ್ಥಗಿತಗೊಳಿಸಿ, DGCA ಆದೇಶ ನೀಡಿದ ಸಂದರ್ಭದಲ್ಲಿ ವಿದೇಶದಲ್ಲಿದ್ದ ಕಿಂಗ್ ಮಲ್ಯ ಇಂದೋ/ ನಾಳೆಯೋ ಭಾರತಕ್ಕೆ ಮರಳಲಿದ್ದಾರೆ. ಹಾಗೆ ಮಲ್ಯ ವಾಪಸಾಗುತ್ತಿದ್ದಂತೆ ಅವರ ಖಾಸಗಿ ಜೆಟ್ ಅನ್ನು ವಶಪಡಿಸಿಕೊಳ್ಳುತ್ತೀರಾ ಹೇಗೆ ಎಂದು ಮಲ್ಯ ಸಿಬ್ಬಂದಿ ಆತಂಕದಿಂದ AAI ಅಧಿಕಾರಿಗಳನ್ನು ಕೇಳಿದ್ದಾರೆ.

aai-may-impound-mallya-personal-airbus-vt-vjm

ಅಥವಾ AAI ಅಧಿಕಾರಿಗಳು ಮಲ್ಯ ಇಷ್ಟಾನುಸಾರ ಅವರ VT-VJM ಜೆಟ್ ಅನ್ನು ಬೆಂಗಳೂರಿನಲ್ಲಿಳಿಯಲು ಅವಕಾಶ ನೀಡದೆ ವಿಮಾನ ನಿಯಂತ್ರಣ ಕೊಠಡಿ (ATC) ಸಹಾಯ ಪಡೆದು ನೇರವಾಗಿ ಸಮೀಪದ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಸೂಚಿಸಿ, ಜೆಟ್ ಅನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಆಲೋಚನೆಯೂ ಇದೆ ಎಂದು AAI ಮೂಲಗಳು ತಿಳಿಸಿವೆ.

ಕಿಂಗ್ ಫಿಶರ್ ಏರ್ ಲೈನ್ಸ್ ಕಂಪನಿಯು AAIಗೆ ಬರೋಬ್ಬರಿ 300 ಕೋಟಿ ರೂ. ಬಾಡಿಗೆ ಹಣ ನೀಡಬೇಕಾಗಿದೆ. ಎಲ್ಲವನ್ನೂ ಕಳೆದುಕೊಂಡು ಬರಿಗೈದಾಸನಾಗಿರುವ ಮಲ್ಯರಿಂದ ಆ ಬಾಕಿ ಬಾಡಿಗೆ ವಾಪಸಾಗುವುದು ಗಗನಕುಸುಮ. ಹಾಗಾಗಿ ಆತನ ಖಾಸಗಿ ಜೆಟ್ ವಶಕ್ಕೆ ತೆಗೆದುಕೊಳ್ಳುವ ಮೂಲಕವಾದರೂ ಬಾಕಿ ಚುಕ್ತಾ ಆಗಲಿ ಎಂಬುದು AAI ಇರಾದೆಯಾಗಿದೆ ಎನ್ನಲಾಗಿದೆ.

ಇದೇ ವಾರಾಂತ್ಯ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಫಾರ್ಮುಲಾ 1 ರೇಸ್ ನಲ್ಲಿ ಮಲ್ಯ ಹಾಜರಾಗುವುದು ನಿಕ್ಕಿಯಾಗಿದೆ. ಶುಕ್ರವಾರ ಸಾಯಂಕಾಲದೊಳಗಾಗಿ ತಮಗೆ ಬಾಕಿಯಿರುವ 4 ತಿಂಗಳ ವೇತನ ನೀಡದಿದ್ದರೆ ಫಾರ್ಮುಲಾ 1 ರೇಸ್ ನಲ್ಲಿ ಮಲ್ಯ ಸಾಹೇಬರಿಗೆ ಗಂಟುಬೀಳುವುದು ಗ್ಯಾರಂಟಿ ಎಂದು ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+