ನಂಬಿ, ಭೂಮಿಗಿಂತ ದೊಡ್ಡದಾದ ವಜ್ರ ಅಸ್ತಿತ್ವದಲ್ಲಿದೆ

ಇಲ್ಲಿ ವಿಷಯ ಅದಲ್ಲ. ಭೂಮಿಯ ತೂಕವನ್ನು ಮೊದಲು ಹೇಳಿದಂತೆ 5.9736×1024 ಕೆಜಿ ಎಂದೇ ಪರಿಗಣಿಸೋಣ. ಅಲ್ಲಿಗೆ ಅದು ಭಾರಿ ತೂಕದ್ದಾಯಿತು. ಬಿಡಿ ಅದಕ್ಕಿಂತ ತೂಕದ ವಜ್ರ ಸಿಕ್ಕಿದೆ. ಅದು ಭೂಮಿಯ ತೂಕದ ಎರಡರಷ್ಟಿದೆ.
55 Cancri e ಎಂಬ ಈ ಕಲ್ಲು ಗ್ರಹವನ್ನು ಅಮೆರಿಕ-ಫ್ರಾನ್ಸ್ ಸಂಶೊಧನಾ ತಂಡ ಪತ್ತೆ ಹಚ್ಚಿದೆ. ಆದರೆ ಇದರ ತಾಪಮಾನ ಸೂರ್ಯನ ತಾಪಕ್ಕಿಂತ ಹೆಚ್ಚಾಗಿದೆ. ಅಂದರೆ 2,148 ಸೆಲ್ಸಿಯಸ್ ಇದೆ. ಇಷ್ಟೊಂದು ತಾಪಮಾನವಿದ್ದರೂ ವಜ್ರ ಕರಗಿಲ್ಲ ಅಂದರೆ ಅದು ನಿಜಕ್ಕೂ ಇನ್ನೆಷ್ಟು ಬಲಿಷ್ಠವಾಗಿರಬೇಕು ನೀವೇ ಊಹಿಸಿ. ಹಾಗೆಯೇ ಇದು ಊಹೆಗೆ ನಿಲುಕದ ದೂರದಲ್ಲಿದೆ.
ಫ್ರಾನ್ಸಿನ Institut de Recherche en Astrophysique et Planetologie in Toulose ಸಂಶೋಧನಾ ಸಂಸ್ಥೆ ಈ ಗ್ರಹವನ್ನು ಪತ್ತೆಹಚ್ಚಿದೆ. ಈ ಹಿಂದೆಯೂ ವಜ್ರದ ಗ್ರಹಗಳು ಪತ್ತೆಯಾಗಿವೆ. ಆದರೆ ಸೂರ್ಯನಂತಹ ಗ್ರಹವನ್ನು ಸುತ್ತುತ್ತಿರುವ ಈ 55 Cancri e ಕಲ್ಲು ಗ್ರಹಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.












Click it and Unblock the Notifications