ಬಸವನಗುಡಿಯಲ್ಲಿ ಮಂಗಳವಾರ ಸಂಜೆ ಗುಂಡಿನ ಸದ್ದು

ಡ್ರೈವರ್ ಜೊತೆ ಪ್ರಯಾಣಿಸುತ್ತಿದ್ದ ಪೈ ಅವರ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಲಾಗಿದೆ. ಕಾರಿನ ಎರಡೂ ಕಡೆ ಗುಂಡು ಹಾರಿಸಿದ್ದರಿಂದ ಕಾರು ಜಖಂಗೊಂಡಿದ್ದು ಡ್ರೈವರ್ ಮತ್ತು ಪೈ ಅವರಿಗೆ ಏನೂ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.
ಮಂಗಳವಾರ (ಅ 16) ಸಂಜೆ ಆರು ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಜಮೀನು ವ್ಯಾಜ್ಯ ಇತ್ಯರ್ಥಕ್ಕಾಗಿ ಹೆಬ್ಬೆಟ್ಟು ಮಂಜನ ಸಹಚರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕಾರಿಗೆ ಯಾರೋ ಕಲ್ಲಿನಿಂದ ಹೊಡೆದ ಅನುಭವ ನನಗಾಗಿದೆ. ಗುಂಡಿನ ದಾಳಿಯ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ ಎಂದು ದಯಾನಂದ ಪೈ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು ಮೂಲದ ದಯಾನಂದ್ ಪೈ ಅವರು ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಪೈ ಅವರು ಸೆಂಚುರಿ ಗ್ರೂಪ್ ಆಫ್ ಕಂಪೆನಿಯ ಮಾಲೀಕರು ಅಲ್ಲದೆ ಐಕಾನ್ ಹಾಸ್ಪಿಟಾಲಿಟಿಯ ನಿರ್ದೇಶಕರು ಕೂಡ.












Click it and Unblock the Notifications