ಗೂಗಲ್ ಅಂತರ್ಜಾಲದಲ್ಲಿ ಬಿಎಂಟಿಸಿ ಬಸ್ ಹುಡುಕಾಟ

ಬೆಂಗಳೂರು, ಅ.17: ಈಗೀಗ ಸಿಲಿಕಾನ್ ಕಣಿವೆಯಲ್ಲಿ ಕೈಗೊಂದು, ಭುಜಕ್ಕೊಂದು ಅಂತರ್ಜಾಲ ಸಾಧನ ಸಿಗುತ್ತಿದೆ. ಇದನ್ನು ಸರಕಾರವೂ ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದೆ. ಸರಕಾರಿ ಸೇವೆಗಳಲ್ಲಿ ಕಂಪ್ಯೂಟರ್ ಲಗ್ಗೆಯಿಟ್ಟು ಯಾವುದೋ ಕಾಲವಾಗಿದೆ. ಈಗೀಗ ಅದಕ್ಕೆ ಅಂತರ್ಜಾಲ ಸಂಪರ್ಕವನ್ನೂ ತೊಡಿಸಿ, value-added service ಕೊಡಮಾಡುತ್ತಿದೆ.

ಅಂತಹ ಒಂದು ಪ್ರಯತ್ನದಲ್ಲಿ BMTC ಯಾನೆ ಬೆಂಗಳೂರು ಮಹಾನಗರ ಸಾರಿಗೆ ಯಾನೆ ಪುರಾತನ ಬಿಟಿಎಸ್ ಬಸ್ಸುಗಳು ಸಂಚರಿಸುವ ಮಾರ್ಗಗಳ ವಿವರಗಳನ್ನು ಅಂತರ್ಜಾಲದ ಮೂಲಕ BMTC ಸಂಸ್ಥೆ ತಿಳಿಸುತ್ತಿದೆ.

BMTC website to guide you with route map details

ನೀವೀಗ ಜಯನಗರದಿಂದ ಶಾಂತಿನಗರಕ್ಕೆ ಹೋಗಬೇಕು ಎನ್ನುವಿರಾದರೆ ನಿಮ್ಮ ಅಂತರ್ಜಾಲ ಪಟದಲ್ಲಿ BMTC ವೆಬ್ ಸೈಟ್ ಬಾಗಿಲು ತೆರೆದು ನೋಡಿದರೆ ಸಾಕು. ಸವಿವರ/ ಸಚಿತ್ರ ಮಾರ್ಗಸೂಚಿ ನಿಮ್ಮ ಕಣ್ಣೆದುರು ಮೂಡುತ್ತದೆ. ಈ ಉಚಿತ ಸೇವೆಯನ್ನು ಸಾಧ್ಯವಾಗಿಸಲು ಸಂಸ್ಥೆಯು ಗೂಗಲ್ ಮ್ಯಾಪ್ ನೆರವನ್ನೂ ಪಡೆದುಕೊಂಡಿದ್ದುuser-friendly ಆಗಿದೆ.

ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಅಥವಾ ನಿಮ್ಮ ಲ್ಯಾಪ್ ಟಾಪ್/ ಡೆಸ್ಕ್ ಟಾಪ್ ಕಂಪ್ಯೂಟರಿನಲ್ಲಿ ಅಂತರ್ಜಾಲ ಸಂಪರ್ಕ ಹೊಂದಿದ್ದರೆ ಸಾಕು ಇಡೀ ಬಿಎಂಟಿಸಿ ಬಸ್ ಪುರಾಣ ಅನಾವರಣವಾಗುತ್ತದೆ.

ಅಂದಹಾಗೆ ದೇಶದಲ್ಲೇ ಇದು ಮೊದಲ ಪ್ರಯೋಗವಾಗಿದೆ. ಅಷ್ಟಕ್ಕೂ ಇದು ಸಾಧ್ಯವಾಗುತ್ತಿರುವುದು ಸದ್ಯಕ್ಕೆ Vajra, Vayu Vajra ಮತ್ತು Big10 buseಗಳಿಗೆ ಮಾತ್ರ. ಏಕೆಂದರೆ ಹೆಚ್ಚಾಗಿ ಈ ಬಸ್ಸುಗಳಲ್ಲಿ ಸಂಚರಿಸುವವರ ಬಳಿ ಮೊಬೈಲ್ ಅಥವಾ ಲ್ಯಾಪ್ ಟಾಪ್ ಇರುತ್ತದೆ ಎಂಬುದು BMTC ತರ್ಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+