31 ಸಾವಿರ ಗಡಿಯಿಂದ ಕುಸಿದ ಚಿನ್ನದ ದರ

ಅಖಿಲ ಭಾರತೀಯ ಸರಾಫ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಂದರ್ ಜೈನ್ ಅವರ ಎಣಿಕೆ ಪ್ರಕಾರ ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಚಿನ್ನದ ಬೆಲೆ 32 ಸಾವಿರ ರು ಗಡಿಯಲ್ಲೇ ಮುಂದುವರೆಯುವ ಸಾಧ್ಯತೆಯಿತ್ತು. ಆದರೆ, ರೂಪಾಯಿ ಮೌಲ್ಯ ಕುಸಿದಿರುವುದೂ ಚಿನ್ನದ ಆಮದನ್ನು ದುಬಾರಿಗೊಳಿಸಿರುವುದು ಮುಂತಾದ ಕಾರಣಕ್ಕೆ Multi commodity exchange ನಲ್ಲಿ ಫ್ಯೂಚರ್ ಹಾಗೂ ಸ್ಪಾಟ್ ಚಿನ್ನ ಎರಡರ ದರವೂ ಇಳಿಕೆಯಾಗಿದೆ.
ಸೆಪ್ಟೆಂಬರ್ ನಲ್ಲಿ 10 ಗ್ರಾಂಗೆ 32,450 ರು ನಷ್ಟಿದ್ದ ಚಿನ್ನದ ದರ ಮಂಗಳವಾರ(ಅ.16) ಸಂಜೆ ವೇಳೆಗೆ MCX ನಲ್ಲಿ ಪ್ರತಿ 10 ಗ್ರಾಂಗೆ 30,982 ರು, ಸ್ಪಾಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 30,706 ರು ಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಗೆ 1,740 ಯುಎಸ್ ಡಾಲರ್ ನಂತೆ ಟ್ರೇಡಿಂಗ್ ಮಾಡುತ್ತಿದೆ. ಇದೇ ವೇಳೆ ಬೆಳ್ಳಿ ದರ ಪ್ರತಿ ಕೆಜಿಗೆ 60,075 ರು ಗೆ ಕುಸಿದಿದೆ.
ಬೆಂಗಳೂರಿನಲ್ಲಿ ಮಂಗಳವಾರ (ಅ.16) ಚಿನ್ನ(spot) ದ ದರ 31,100.00 ರು (24K), 28,900 ರು(22K), ಬೆಳ್ಳಿ 1 ಕಿಲೋ 60,200 ರು ಇದೆ. ಉಳಿದಂತೆ ಚೆನ್ನೈನಲ್ಲಿ 22K(31,075), 24K(31,200) ಇದೆ.
ಅಹಮದಾಬಾದಿನಲ್ಲಿ 31000.00(22K), 31205.00(24K). ಮುಂಬೈ, ದೆಹಲಿ, ಜೈಪುರಗಳಲ್ಲಿ 31 ಸಾವಿರ ಗಡಿಯಲ್ಲೇ ಚಿನ್ನದ ದರ ಮುಂದುವರೆದಿರುವುದು ಗ್ರಾಹಕರಿಗೆ ನೆಮ್ಮದಿ ತಂದಿದೆ.
ರುಪಾಯಿ vs ಡಾಲರ್ ಸಮರಕ್ಕೆ ಸಿಕ್ಕು ಈಗಾಗಲೇ ರೂ. 30 ಸಾವಿರದ ಗಡಿಯನ್ನು ದಾಟಿದ್ದ ಚಿನ್ನದ ದರ ಗ್ರಾಹಕರನ್ನು ಕಂಗಾಲಾಗಿಸಿತ್ತು.
ಕಳೆದ ಆಗಸ್ಟ್ ನಲ್ಲಿ 16 ವಾರಗಳ ಹೋಲಿಕೆಯಲ್ಲಿ ಅತ್ಯಧಿಕ ಏರಿಕೆ ದಾಖಲಿಸಿದ್ದ ಚಿನ್ನದ ದರ ನಂತರ ಜಾಗತಿಕ ಮಾರುಕಟ್ಟೆಯಲ್ಲಿನ ವ್ಯತ್ಯಯದಿಂದ ಏರಿಕೆ ಮುಂದುವರೆಸಿತ್ತು.
ಯುರೋಪಿನಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಆಗುತ್ತಿದೆ. ಬಂಡವಾಳ ಹೂಡಿಕೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯೂ ಚಿನ್ನದ ಬೆಲೆಯ ಮೇಲೆ ಆಗುತ್ತಿದೆ. ಚಿನ್ನದ ದರ ಇಳಿಕೆಯಿಂದ ಗ್ರಾಹಕರಿಗೆ ಸಂತಸ ಉಂಟಾಗಿದ್ದರೂ ಹೂಡಿಕೆದಾರರಿಗೆ ಬೇಸರ ಮೂಡಿಸಿದೆ.












Click it and Unblock the Notifications