ಮೋದಿಗೆ ಬ್ರಿಟನ್ ರಹದಾರಿ ಸಿಕ್ತು, ಮುಂದೆ ಅಮೆರಿಕ?

ಇದರಿಂದ ಡಿಸೆಂಬರ್ ಅಂತ್ಯಕ್ಕೆ 'ಹ್ಯಾಟ್ರಿಕ್ ಮುಖ್ಯಮಂತ್ರಿ' ಅನ್ನಿಸಿಕೊಳ್ಳುವ ತವಕದಲ್ಲಿರುವ ಗುಜರಾತ್ ಸಿಎಂ ನರೇಂದ್ರ ಮೋದಿಗೆ ಆನೆ ಬಲ ಬಂದಿದೆ. ಗುಜರಾತಿನಲ್ಲಿ 182 ವಿಧಾನಸಭೆ ಕ್ಷೇತ್ರಗಳಿಗೆ ಡಿಸೆಂಬರ್ 13 ಮತ್ತು 17ರಂದು ಚುನಾವಣೆ ನಡೆಯಲಿದೆ. ತಮ್ಮ ವಿವೇಕಾನಂದ ಯುವ ವಿಕಾಸ ಯಾತ್ರೆಯ ಕೊನೆಯ ದಿನ, ಜಯಪ್ರಕಾಶ್ ನಾರಾಯಣ್ ಅ ವರ ಜನ್ಮ ದಿನದಂದು ಬ್ರಿಟನ್ ಸರಕಾರ ಮೋದಿಗೆ 'ನಮೋ ನಮಃ' ಎಂದಿರುವುದು ಮೋದಿಗೆ ಬಯಸದೇ ಬಂದ ಭಾಗ್ಯವಾಗಿದೆ.
ಸದ್ಯದಲ್ಲೇ ಅಮೆರಿಕ ಸಹ ನರೇಂದ್ರ ಮೋದಿಗೆ ವೀಸಾ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
10 ವರ್ಷಗಳ ನಿಷೇಧವನ್ನು ಹಿಂತೆಗೆದುಕೊಂಡಿರುವುದು 'ವಿಳಂವಾದರೂ ಉತ್ತಮ ನಿರ್ಧಾರವಾಗಿದೆ. ದೇವರು ದೊಡ್ಡವನು ಎಂದು ಟ್ವೀಟ್ ಮಾಡಿ ಮೋದಿ ಸಂತಸ ಹಂಚಿಕೊಂಡಿದ್ದಾರೆ: Der Aaye Durasta Aaye (Better late than never)!! I welcome UK Govt's step for active engagement & strengthening relations with Gujarat. God is Great.
ಈ ಸಂಬಂಧ ತಕ್ಷಣ ಗುಜರಾತಿಗೆ ತೆರಳಿ ಅಲ್ಲಿನ ಸರಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಎಂದು ಭಾರತದಲ್ಲಿರುವ ತನ್ನ ರಾಯಭಾರಿ ಜೇಮ್ಸ್ ಬೆವನ್ ಅವರಿಗೆ ಬ್ರಿಟನ್ ಸರಕಾರ ಫರ್ಮಾನು ಹೊರಡಿಸಿದೆ. ಜತೆಗೆ 2002ರಲ್ಲಿ ಮಡಿದ ಬ್ರಿಟನ್ ಪ್ರಜೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ.
ಬ್ರಿಟನ್ ಸರಕಾರದ ಈ ನಿರ್ಧಾರದಿಂದ ಗುಜರಾತ್ ಮತ್ತು ಬ್ರಿಟನ್ ಸರಕಾರದ ನಡುವೆ ಉತ್ತಮ ಬಾಂಧವ್ಯ ಏರ್ಪಡಲು ಸಹಕಾರಿಯಾಗುತ್ತದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಬ್ರಿಟನ್ ಸರಕಾರದ ನಿರ್ಧಾರವನ್ನು ಮೋದಿ ಸ್ವಾಗತಿಸಿದ್ದಾರೆ.
ಗುಜರಾತಿನಲ್ಲಿ ವಾಸಿಸುತ್ತಿರುವ ಬ್ರಿಟನ್ನರಿಗೆ ಸಕಲ ನೆರವು ನೀಡಲು ನಾವು ಸಿದ್ಧ. ಹಾಗೇ, ಯುಕೆನಲ್ಲಿ ಅತ್ಯಂತ ಯಶಸ್ವಿ ಮತ್ತು ಗುಜರಾತೀಯರು ಇದ್ದಾರೆ. ಅವರಿಗೂ ಿದೇ ರೀತಿಯ ಭದ್ರತೆ ಮತ್ತು ನೆರವಿನ ಹಸ್ತ ಚಾಚುವಂತೆ ಅಲ್ಲಿನ ಸರಕಾರಕ್ಕೆ ಕೋರುವುದಾಗಿ ಮೋದಿ ಪ್ರತಿಕ್ರಿಯಿಸಿದ್ದಾರೆ.
ಗೋಧ್ರೋತ್ತರ ಬೆಳವಣಿಗೆಗಳ ನಂತರ 2003ರಿಂದೀಚೆಗೆ ಮೋದಿ ಬ್ರಿಟನ್ನಿಗೆ ಭೇಟಿ ನೀಡಿರಲಿಲ್ಲ. ಏಕೆಂದರೆ ಗುಜರಾತ್ ಸರಕಾರದ ಜತೆ ಯಾವುದೇ ನಿಕಟ, ಸಕ್ರಿಯ ಸಂಪರ್ಕ ಹೊಂದಲು ಬ್ರಿಟನ್ ನಿರಾಕರಿಸಿತ್ತು. ಈಗ ಪರಿಸ್ಥಿತಿ ತಿಳಿಯಾಗಿದೆ. ಲಾರ್ಡ್ ಸ್ವರಾಜ್ ಪಾಲ್ ಅವರು ಬ್ರಿಟನ್ ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇದು ಎಂದೋ ಆಗಬೇಕಿತ್ತು. ಮೋದಿ ಅವರು ಒಂದಲ್ಲ ಎರಡು ಬಾರಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿ. ಬ್ರಿಟನ್ ತಡವಾಗಿಯಾದರೂ ಮೋದಿ/ಗುಜರಾತ್ ವಿಚಾರವಾಗಿ ಉತ್ತಮ ನಿಲುವು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
'ಆದರೆ ಇದು ನಮ್ಮ ಪ್ರಧಾನಿ ಸಿಂಗ್ ಅವರಿಗೆ ಮನವರಿಕೆಯಾಗಿಲ್ಲ. ಬದಲಿಗೆ ಬ್ರಿಟನ್ ಸರಕಾರವೇ ಮುಂದುಬಂದಿದೆ' ಎಂದು ಮೋದಿ ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದ್ದಾರೆ.












Click it and Unblock the Notifications