ಮಾದೇಗೌಡರ ಬೆಂಬಲಕ್ಕೆ ನಿಂತ ರಾಜ್ಯ ವಕೀಲರ ಸಂಘ

bangalore-advocates-committee-to-fight-cauvery-cause
ಬೆಂಗಳೂರು, ಅ.10: ಕಾವೇರಿ ನದಿ ನೀರು ಹೋರಾಟದಲ್ಲಿ ರಾಜ್ಯದ ಬೆಂಬಲಕ್ಕೆ ಕೈಜೋಡಿಸುವುದಾಗಿ ಹಿರಿಯ ವಕೀಲರು ಪ್ರತಿಜ್ಞೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರೈತ ಹಿತರಕ್ಷಣಾ ಸಮಿತಿ ನಡೆಸುವ ಕಾನೂನು ಹೋರಾಟಕ್ಕೆ ತಜ್ಞರ ಸಮಿತಿ ರಚಿಸಿ, ಉಚಿತ ನೆರವು ನೀಡುವುದಾಗಿ ರಾಜ್ಯ ವಕೀಲರ ಸಮೂಹವು ಭರವಸೆ ನೀಡಿದೆ.

ನಿನ್ನೆ ಹೈಕೋರ್ಟಿನಲ್ಲಿ ವಕೀಲರ ಸಂಘ ಏರ್ಪಡಿಸಿದ್ದ 'ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಅವಲೋಕನ' ಎಂಬ ಸಂವಾದ ಕಾರ್ಯಕ್ರಮದಲ್ಲಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರಿಗೆ ಮಾಜಿ ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಅಶೋಕ್ ಹಾರ್ನಹಳ್ಳಿ, ಹಿರಿಯ ವಕೀಲರುಗಳಾದ ಪ್ರೊ. ರವಿವರ್ಮ, ಎಕೆ ಸುಬ್ಬಯ್ಯ, ಕೆ ಎನ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ವಕೀಲರ ಸಂಘ ಖುದ್ದಾಗಿ ಈ ಭರವಸೆ ನೀಡಿದೆ.

ಕಾನೂನು ತಜ್ಞರ ಸಮಿತಿಯಲ್ಲಿ ಒಟ್ಟು 11 ಮಂದಿ ಇರುತ್ತಾರೆ. ಕಾವೇರಿ ವಿವಾದ ಸಂಬಂಧ ವಾರಕ್ಕೊಮ್ಮೆ ಈ ಸಮಿತಿ ಸಭೆ ನಡೆಸಿ, ಚರ್ಚಿಸಲಿದೆ. ಕಾವೇರಿ ವಿವಾದ ಸಂಬಂಧ ಕಾನೂನಾತ್ಮಕ ಹೋರಾಟದ ಬಗ್ಗೆ ಸಲಹೆ ಸೂಚನೆ ನೀಡಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಹಾಗೂ ಮದ್ರಾಸ್ ಸರ್ಕಾರವಿದ್ದಾಗ ಮಾಡಿದ ಕೆಲವು ನೀತಿ ನಿಯಮಗಳು ಬದಲಾಗದಿರುವುದೇ ಕಾವೇರಿ ವಿವಾದ ಕಗ್ಗಂಟಾಗಲು ಕಾರಣವಾಗಿದೆ. 1974ರಿಂದ ಏಕಪಕ್ಷ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿಲ್ಲ. ಹೀಗಾಗಿ ಆಯಾ ಕಾಲಘಟ್ಟದಲ್ಲಿ ತಮಿಳುನಾಡು ಸಂಸದರು ಕೇಂದ್ರ ಸರ್ಕಾರಕ್ಕೆ ಮಾಡಿದ ಒತ್ತಡ ತಂತ್ರ ಅವರಿಗೆ ಫಲ ನೀಡಿದೆ ಎಂದು ಮಾದೇಗೌಡರು ವಿಷಾದ ವ್ಯಪ್ತಪಡಿಸಿದರು.

ಈ ಹಿಂದಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು ಸಮಸ್ಯೆ ಬಗೆಹರಿಸಲು ರಾಜ್ಯ ವಕೀಲರ ಸಮೂಹ ನೆರವಾಗಬೇಕು ಎಂದು ಮಾದೇಗೌಡರು ಮನವಿ ಮಾಡುತ್ತಿದ್ದಂತೆ ವಕೀಲರ ಸಂಘ ತಕ್ಷಣ ಸ್ಪಂದಿಸಿದೆ.

ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ: ಜಿ ಮಾದೇಗೌಡ, ಮಾಜಿ ಅಡ್ವೊಕೇಟ್ ಜನರಲ್ ಬಿವಿ ಆಚಾರ್ಯ, ಉದಯ ಹೊಳ್ಳ, ಅಶೋಕ್ ಹಾರ್ನಳ್ಳಿ, ಎಕೆ ಸುಬ್ಬಯ್ಯ, ಆರ್ ಎನ್ ನರಸಿಂಹ ಮೂರ್ತಿ, ಹಿರಿಯ ವಕೀಲರುಗಳಾದ ಪ್ರೊ. ರವಿವರ್ಮ ಕುಮಾರ್, ಕೆ ಎನ್ ಸುಬ್ಬಾರೆಡ್ಡಿ, ಎಪಿ ರಂಗನಾಥ್, ಬಿ ಎಸ್ ರಾಜಶೇಖರ್ ಮತ್ತು ಮಂಡ್ಯದ ಕೇಶವಮೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+